ಚೆನ್ನೈ (ತಮಿಳುನಾಡು): ಕ್ರೀಡೆ ಅಂದ್ರೇನೆ ಹಾಗೆ. ಅಚ್ಚರಿಗಳಿಗೆ ಇಲ್ಲಿ ಕೊರತೆಯಿಲ್ಲ. ಪಂದ್ಯ ಸೋತೆವು ಅನ್ನುವಷ್ಟರಲ್ಲಿ ಪವಾಡ ಎಂಬಂತೆ ತಂಡವೊಂದು ಪಂದ್ಯ ಗೆಲ್ಲುತ್ತೆ. ಗೆದ್ದೇ ಬಿಟ್ಟೆವು ಅನ್ನುವಷ್ಟರಲ್ಲಿ ಪ್ರಪಾತಕ್ಕೆ ಕುಸಿದು ಸೋಲಿನ ಬರೆ ಬಿದ್ದಿರುತ್ತೆ. ಅದೆಷ್ಟೋ ಪಂದ್ಯಗಳು ಕೊನೆಯ 1 ಎಸೆತದಲ್ಲಿ ನಿರ್ಧಾರವಾಗಿರುತ್ತವೆ. ಎಂತಹ ಕರಾರುವಾಕ್ ಬೌಲರ್ ಕೂಡ ತಪ್ಪಿನ ಮೇಲೆ ತಪ್ಪು ಮಾಡಿ ದಂಡಿಸಿಕೊಳ್ಳುತ್ತಾನೆ. ಇಂಥದ್ದೇ ಒಂದು ಪ್ರಸಂಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದಿದೆ.
-
The most expensive delivery ever? 1 Ball 18 runs#TNPLonFanCode pic.twitter.com/U95WNslHav
— FanCode (@FanCode) June 13, 2023 " class="align-text-top noRightClick twitterSection" data="
">The most expensive delivery ever? 1 Ball 18 runs#TNPLonFanCode pic.twitter.com/U95WNslHav
— FanCode (@FanCode) June 13, 2023The most expensive delivery ever? 1 Ball 18 runs#TNPLonFanCode pic.twitter.com/U95WNslHav
— FanCode (@FanCode) June 13, 2023
ಒಂದು ಎಸೆತದಲ್ಲಿ ಅಬ್ಬಬ್ಬಾ ಅಂದ್ರೂ 6 ರನ್ ನೀಡಬಹುದು. ಆದರೆ, ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಬೌಲರ್ವೊಬ್ಬ ಬರೋಬ್ಬರಿ 18 ರನ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಈತನ ಕಳಪೆ ಆಟದಿಂದ ತಂಡ ಟಿ-20 ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಇಷ್ಟಲ್ಲದೇ, ಇದು ಟಿಎನ್ಪಿಎಲ್ನಲ್ಲಿ ಕಳಪೆ ದಾಖಲೆ ಸೃಷ್ಟಿಸಿದೆ.
ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಈ ಕೆಟ್ಟ ದಾಖಲೆ ಸೃಷ್ಟಿಯಾಯಿತು. ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಪಂದ್ಯದ ಮೊದಲ ಇನ್ನಿಂಗ್ಸ್‌ನ 20ನೇ ಓವರ್‌ನ ಕೊನೆಯ ಓವರ್ನಲ್ಲಿ ಸತತ ನೋಬಾಲ್, ವೈಡ್ ಎಸೆದು 18 ರನ್ ದಂಡಿಸಿಕೊಂಡರು. 2022 ರ ಆವೃತ್ತಿಯಲ್ಲಿ ಅಭಿಷೇಕ್ ತನ್ವರ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಆದರೆ, ಸೂಪರ್ ಗಿಲ್ಲಿಸ್ ವಿರುದ್ಧದ ಪಂದ್ಯದಲ್ಲಿ ಲಯ ಕಂಡುಕೊಳ್ಳಲು ಹೆಣಗಾಡಿದರು.
ಕೊನೆಯ ಒಂದು ಎಸೆತವನ್ನು ಪೂರ್ಣಗೊಳಿಸಲು ಒದ್ದಾಡಿದ ಬೌಲರ್ ಎದುರಾಳಿ ತಂಡಕ್ಕೆ ಕಾಣಿಕೆಯಾಗಿ 18 ರನ್ ನೀಡುವುದು ಜೊತೆಗೆ, ಓವರ್ನಲ್ಲಿ 26 ರನ್ ಬಿಟ್ಟುಕೊಟ್ಟರು. ಇದರಿಂದ ಚೆಪಾಕ್ ಸೂಪರ್ ಗಿಲ್ಲಿಸ್ 5 ವಿಕೆಟ್ಗೆ 217 ರನ್ಗಳ ಬೃಹತ್ ಮೊತ್ತ ಗಳಿಸಿತು.
ಹೀಗಿತ್ತು ಕೊನೆ ಓವರ್‌ನ ಕೊನೆ ಎಸೆತ: 19.5 ಓವರ್ ಇದ್ದಾಗ ಅಭಿಷೇಕ್ ಕ್ರೀಸ್ ದಾಟಿ ನೋ ಬಾಲ್ ಎಸೆದರು. ಬಳಿಕ ಮುಂದಿನ ಎಸೆತದಲ್ಲಿ ಮತ್ತೊಂದು ನೋ ಬಾಲ್ ಹಾಕಿದಾಗ ಬ್ಯಾಟರ್ ಅದನ್ನು ಸಿಕ್ಸರ್ ಗಟ್ಟಿದರು. ಇದಾದ ಮುಂದಿನ ಎಸೆತವೂ ನೋ ಬಾಲ್ ಆಗಿದ್ದಾಗ ಬ್ಯಾಟರ್‌ಗಳು 2 ರನ್ ಕದ್ದರು. ಒಟ್ಟು 11 ರನ್ ಗಳಿಕೆಯಾದವು. ನಂತರ ಅಭಿಷೇಕ್ ಚೆಂಡನ್ನು ವೈಡ್ ಎಸೆದರು. ಒಟ್ಟು 12 ರನ್‌ಗಳು ದಾಖಲಾದವು. ಕೊನೆಯದಾಗಿ ಉತ್ತಮ ಎಸೆತ ಹಾಕಿದಾಗ ಬ್ಯಾಟರ್ ಅದನ್ನು ಸಿಕ್ಸರ್ ಬಾರಿಸಿದರು. ಇದರಿಂದ ಒಟ್ಟಾರೆ 18 ರನ್‌ಗಳು ಬಂದವು. (1+4+0+1+NB+1+NB+6NB+2NB+WD+6)
ಕೊನೆಯ ಓವರ್ ಎಸೆತ ದುರದೃಷ್ಟಕರವಾಗಿತ್ತು. ಅದರ ಪೂರ್ಣ ಹೊಣೆಯನ್ನು ನಾನೇ ಹೊರುವೆ. ನಾಲ್ಕು ನೋ ಬಾಲ್, ಒಂದು ವೈಡ್ ಸಮೇತ ಒಟ್ಟು 26 ರನ್ ಬಿಟ್ಟುಕೊಟ್ಟಿದ್ದು ನಿರಾಸೆ ಮೂಡಿಸಿದೆ. ಗಾಳಿಯ ಕಾರಣದಿಂದಾಗಿ ನಾನು ಸರಿಯಾಗಿ ಬೌಲ್ ಮಾಡಲು ಆಗಲಿಲ್ಲ ಎಂದು ಸೇಲಂ ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಪಂದ್ಯದ ನಂತರ ಬೇಸರ ವ್ಯಕ್ತಪಡಿಸಿದರು.
ತಂಡದ ನಾಯಕ ಮತ್ತು ಹಿರಿಯ ಆಟಗಾರನ ಈ ದುಬಾರಿ ಓವರ್ ಟೀಕೆಗೆ ಗುರಿಯಾಗಿದೆ. ಅಲ್ಲದೇ, ಪಂದ್ಯದಲ್ಲಿ ಸೇಲಂ ಸ್ಪಾರ್ಟನ್ ತಂಡ ಕೇವಲ 9 ವಿಕೆಟ್ಗೆ 165 ಗಳಿಸಿ, 52 ರನ್ಗಳಿಂದ ಭಾರಿ ಅಂತರದ ಸೋಲು ಕಂಡಿತು.
ಓದಿ: India Cricket Schedule 2023: ಭಾರತ ತಂಡದ ಟಿ20, ಏಕದಿನ, ಟೆಸ್ಟ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ