ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜಿಗೆ 896 ಭಾರತೀಯರು ಸೇರಿದಂತೆ ಒಟ್ಟು 1214 ಕ್ರಿಕೆಟಿಗರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ಶನಿವಾರ ಪ್ರಕಟಣೆ ನೀಡಿದೆ.
ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಯಲಿದ್ದು, 10 ತಂಡಗಳಲ್ಲಿ ಖಾಲಿಯಿರುವ 217 ಸ್ಥಾನಗಳಿಗೆ 1,214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಭಾರತದಿಂದ 896, 318 ವಿದೇಶಿ ಆಟಗಾರರು ಇದ್ದಾರೆ. 270 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರಾಗಿದ್ದರೆ, 903 ಆಟಗಾರರು ಅನ್ಕ್ಯಾಪ್ಡ್ ಆಟಗಾರರಾಗಿದ್ದಾರೆ. 41 ಅಸೋಸಿಯೇಟ್ ತಂಡಗಳ ಆಟಗಾರರು ಲಿಸ್ಟ್ನಲ್ಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಾರತ ತಂಡದಲ್ಲಿ ಆಡಿರುವ 61 ಮತ್ತು 209 ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರತಿನಿಧಿಸಿರುವ ಆಟಗಾರರಿದ್ದಾರೆ. 692 ಅನ್ಕಾಪ್ಡ್ ಭಾರತೀಯರು ಮತ್ತು 62 ಅನ್ಕ್ಯಾಪ್ಡ್ ವಿದೇಶಿ ಆಟಗಾರರು ಮೆಗಾಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಆಟಗಾರರನ್ನು ಪ್ರತಿಯೊಂದು ಫ್ರಾಂಚೈಸಿ ಗರಿಷ್ಠ 25 ಆಟಗಾರನ್ನು ಹೊಂದಲು ಅವಕಾಶವಿದ್ದು, ಹರಾಜಿನಲ್ಲಿ 70 ವಿದೇಶಿ ಆಟಗಾರರು ಸೇರಿದಂತೆ 217 ಆಟಗಾರರಿಗೆ ಮಾತ್ರ ಐಪಿಎಲ್ನಲ್ಲಿ ಆಡುವ ಅದೃಷ್ಠ ಸಿಗಲಿದೆ.
318 ವಿದೇಶಿ ಆಟಗಾರರು
- ಅಫ್ಘಾನಿಸ್ತಾನ 20
- ಆಸ್ಟ್ರೇಲಿಯಾ 59
- ಬಾಂಗ್ಲಾದೇಶ 9
- ಇಂಗ್ಲೆಂಡ್ 30
- ನ್ಯೂಜಿಲ್ಯಾಂಡ್ 29
- ದಕ್ಷಿಣ ಆಫ್ರಿಕಾ 48
- ಶ್ರೀಲಂಕಾ 36
- ವೆಸ್ಟ್ ಇಂಡೀಸ್ 41
- ನೇಪಾಳ 15
- ಐರ್ಲೆಂಡ್ 3
- ಜಿಂಬಾಬ್ವೆ 2
- ನಮೀಬಿಯಾ 5
- ಅಮೆರಿಕ 14
- ಒಮಾನ್, ಯುಎಇ,ಸ್ಕಾಟ್ಲೆಂಡ್ ಮತ್ತು ಭೂತಾನ್ ತಲಾ ಒಬ್ಬ ಆಟಗಾರ
ಇದನ್ನೂ ಓದಿ:2022ರ ಐಪಿಎಲ್ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅತ್ಯಂತ ದುಬಾರಿ ಆಟಗಾರ!