ETV Bharat / sports

ವರ್ಲ್ಡ್​ ಟೂರ್​ ಫೈನಲ್ಸ್.. ಮೊದಲ ಸುತ್ತಿನಲ್ಲೇ ಸೋಲುಕಂಡ ಪಿವಿ ಸಿಂಧು

ನಿರ್ಣಾಯಕವಾಗಿದ್ದ 3ನೇ ಗೇಮ್​ನಲ್ಲಿ ಸಿಂಧು ಪ್ರಬಲ ಪೈಪೋಟಿ ನೀಡಿದರಾದರು ಜು ಯಿಂಗ್​ರನ್ನು ಹಿಮ್ಮೆಟ್ಟಿಸಲಾಗದೆ 17-21ರಲ್ಲಿ ಸೋಲು ಕಂಡರು..

ವರ್ಲ್ಡ್​ ಟೂರ್​ ಫೈನಲ್ಸ್​
ಪಿವಿ ಸಿಂಧುಗೆ ಸೋಲು
author img

By

Published : Jan 27, 2021, 3:54 PM IST

Updated : Jan 28, 2021, 3:25 PM IST

ಬ್ಯಾಂಕಾಕ್​ : ಭಾರತ ತಂಡದ ಅಗ್ರಮಾನ್ಯ ಶಟ್ಲರ್​ ಪಿವಿ ಸಿಂಧು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ವರ್ಲ್ಡ್​ ಟೂರ್​ ಫೈನಲ್ಸ್​ನಲ್ಲಿ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಬುಧವಾರ ವಿಶ್ವದ ನಂ.1​ ಆಗಿರುವ ತೈವಾನ್​ ತಾಯ್ ಜು ಯಿಂಗ್ ವಿರುದ್ಧ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 21-19, 12-21, 17-21ರಲ್ಲಿ ಸೋಲು ಕಂಡು ಟೂರ್ನಿಯಲ್ಲಿ ನೀರಸ ಆರಂಭ ಪಡೆದರು.

ಈ ಮೂಲಕ ಬ್ಯಾಂಕಾಕ್​ನಲ್ಲಿ ನಡೆದ ಸತತ ಮೂರು ಟೂರ್ನಿಗಳಲ್ಲೂ ಯಾವುದೇ ಫೈನಲ್​ ತಲುಪುವಲ್ಲಿ ಕೂಡ ಒಲಿಂಪಿಕ್ ಬೆಳ್ಳಿಪದಕ ವಿಜೇತೆ ವಿಫಲರಾಗಿದ್ದಾರೆ.

ತಾಯ್ ಜು ಯಿಂಗ್
ತಾಯ್ ಜು ಯಿಂಗ್

ಮೊದಲ ಗೇಮ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತೀಯ ಶಟ್ಲರ್ 21-19ರ ಅಂತರದಲ್ಲಿ​ ರೋಚಕ ಜಯ ಸಾಧಿಸಿ ಉತ್ತಮ ಆರಂಭ ಪಡೆದರು. ಆದರೆ, ಎರಡನೇ ಗೇಮ್​ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಜು ಯಿಂಗ್ ಭಾರತೀಯ ಆಟಗಾರ್ತಿಗೆ ತಿರುಗಿ ಬೀಳಲು ಕೂಡ ಅವಕಾಶ ನೀಡದೆ 21-12ರಲ್ಲಿ ಗೆಲುವು ಸಾಧಿಸಿದರು.

  • HSBC BWF World Tour Finals 2020 (New Dates)
    WS - Round 1
    19 21 21 Tzu Ying TAI🏅
    21 12 17 🇮🇳V. Sindhu PUSARLA

    🕗 in 59 minutes
    https://t.co/wDAniF5m4e

    — BWFScore (@BWFScore) January 27, 2021 " class="align-text-top noRightClick twitterSection" data=" ">

ನಿರ್ಣಾಯಕವಾಗಿದ್ದ 3ನೇ ಗೇಮ್​ನಲ್ಲಿ ಸಿಂಧು ಪ್ರಬಲ ಪೈಪೋಟಿ ನೀಡಿದರಾದರು ಜು ಯಿಂಗ್​ರನ್ನು ಹಿಮ್ಮೆಟ್ಟಿಸಲಾಗದೆ 17-21ರಲ್ಲಿ ಸೋಲು ಕಂಡರು.

ಮುಂದಿನ ಸುತ್ತಿನಲ್ಲಿ ಒಲಿಂಪಿಕ್ಸ್​ನಲ್ಲಿ ಪದಕ ಭರವಸೆಯ ಆಟಗಾರ್ತಿಯಾಗಿರುವ ಸಿಂಧು ಥಾಯ್ಲೆಂಡ್​ ಓಪನ್​ ಕ್ವಾರ್ಟರ್​ ಫೈನಲ್ಸ್​ನಲ್ಲಿ ಸೋಲು ಕಂಡಿದ್ದ ರಾಚನೊಕ್ ಇಂಟಾನನ್​ ವಿರುದ್ಧ ಸೆಣಸಾಡಲಿದ್ದಾರೆ.

ಇದನ್ನು ಓದಿ:14ನೇ ಐಪಿಎಲ್ ಮಿನಿ ಹರಾಜಿಗೆ ದಿನಾಂಕ ಫಿಕ್ಸ್​ ಮಾಡಿದ ಬಿಸಿಸಿಐ

Last Updated : Jan 28, 2021, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.