ETV Bharat / sports

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಪದಕ ತರಬಲ್ಲ ಭರವಸೆಯ 6 ಕ್ರೀಡಾಳುಗಳು.. - ಐವರ

2020ರ ಒಲಿಂಪಿಕ್ಸ್‌​ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ಪದಕ ತಂದುಕೊಡಬಲ್ಲ ಭರವಸೆಯ ಕ್ರೀಡಾಪಟುಗಳಲ್ಲಿ ಪಿವಿ ಸಿಂಧು ಪ್ರಮುಖ ಸ್ಥಾನದಲ್ಲಿದ್ದರೆ, ಇನ್ನುಳಿದ ಐವರ ಸಂಪೂರ್ಣ ವಿವಿರ ಇಲ್ಲಿದೆ.

Tokyo Olympics
author img

By

Published : Jul 25, 2019, 11:49 PM IST

ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಕ್ರೀಡಾ ಸ್ಪರ್ಧೆಯಾದ ಒಲಿಂಪಿಕ್ಸ್‌​ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಷ್ಟಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಎಲ್ಲಾ ಕ್ರೀಡೆಯಲ್ಲೂ ಭಾರತದ ಕ್ರೀಡಾಪಟುಗಳು ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಗೊಳಿಸ್ತಿರೋದು ಸಮಾಧಾನಕರ ಸಂಗತಿ.

2020ಕ್ಕೆ ಬೇಸಿಗೆ ಒಲಿಂಪಿಕ್​ ಆರಂಭಗೊಳ್ಳಲಿದ್ದು, ಜಪಾನ್​ ಆತಿಥ್ಯವಹಿಸಲಿದೆ. ಭಾರತ ಒಟ್ಟಾರೆ 24 ಬೇಸಿಗೆ ಒಲಿಂಪಿಕ್​ನಲ್ಲಿ ಭಾಗವಹಿಸಿದ್ದು, ಒಟ್ಟು 28 ಪದಕಗಳನ್ನು ಗೆದ್ದಿದೆ. ಇದರಲ್ಲಿ 9 ಚಿನ್ನ, 7 ಬೆಳ್ಳಿ, 12 ಕಂಚಿನ ಪದಕಗಳು ಸೇರಿವೆ. 2016 ರ ಒಲಿಂಪಿಕ್ಸ್‌​ನಲ್ಲಿ ಕೇವಲ 2 ಪದಕಕ್ಕೆ ಭಾರತ ತೃಪ್ತಿಪಟ್ಟುಕೊಂಡಿತ್ತು. ಬ್ಯಾಡ್ಮಿಂಟನ್​ನಲ್ಲಿ ಪಿವಿ ಸಿಂಧು ಬೆಳ್ಳಿ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್​ ಕಂಚು ಗೆದ್ದಿದ್ದರು. ನೂರು ಕೋಟಿಗೂ ಹೆಚ್ಚು ಜನರಿರುವ ಭಾರತಕ್ಕೆ ಸಿಕ್ಕಿದ್ದು ಕೇವಲ 2 ಪದಕ ಎಂಬುದೇ ನಿರಾಶದಾಯಕ ವಿಷಯ.

2016 ರಲ್ಲಿ ಭಾರತೀಯ ಆಟಗಾರರು ಹೆಚ್ಚು ಪದಕಗಳಿಸಲಿಲ್ಲ ಎಂಬ ನಿರಾಶೆಯಿಂದ ಹೊರಬಂದು 2020ರ ಒಲಿಂಪಿಕ್​ನಲ್ಲಿ ಹೆಚ್ಚು ಪದಕ ನಿರೀಕ್ಷಿಸಲಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಕ್ರೀಡೆಯಲ್ಲಿ ಕೆಲವು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಭಾರತಕ್ಕೆ ಪದಕ ತಂದುಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

1.ಪಿವಿ ಸಿಂಧು

ಹೈದರಾಬಾದ್​ನ ಪಿವಿ ಸಿಂಧು ತನ್ನ 21 ವಯಸ್ಸಿನಲ್ಲಿ 2016ರ ರಿಯೋ ಒಲಿಂಪಿಕ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಕಳೆದ ಮೂರು ವರ್ಷಗಳಿಂದ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, 2020ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಕ್ರೀಡಾಪಟುಗಳಲ್ಲಿ 25ರ ಹರೆಯದ ಸಿಂಧು ಮೊದಲ ಸ್ಥಾನದಲ್ಲಿದ್ದಾರೆ.

Tokyo Olympics
ಪಿವಿ ಸಿಂಧು

2. ಶಿವ ಥಾಪ

ಬಾಕ್ಸಿಂಗ್​ ವಿಭಾಗದಲ್ಲಿ ಈಗಾಗಲೇ ವಿಜೇಂದರ್​ ಸಿಂಗ್​, ಮೇರಿ ಕೋಮ್​ ಭಾರತಕ್ಕೆ ಪದಕ ತಂದುಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೀಗ ಯುವ ಬಾಕ್ಸರ್​ ಶಿವ ಥಾಪ ಮೇಲೆ ಪದಕ ನಿರೀಕ್ಷೆ ಮಾಡಲಾಗಿದೆ.

ಥಾಪ ಕಳೆದ ವಾರವಷ್ಟೇ ಕಜಕಿಸ್ತಾನದಲ್ಲಿ ನಡೆದ ಪ್ರೆಸಿಡೆಂಟ್​ ಕಪ್​ ಬಾಕ್ಸಿಂಗ್​ ಐತಿಹಾಸಿಕ ಚಿನ್ನ ಗೆದ್ದಿದ್ದರು. 63 ಕೆ.ಜಿ ವಿಭಾಗದಲ್ಲಿ ಇವರಿಂದ ಒಂದು ಪದಕ ನಿರೀಕ್ಷಿಸಲಾಗಿದೆ.

Tokyo Olympics
ಶಿವ ಥಾಪಾ

3. ಮನು ಭಕೆರ್​

10 ಮೀಟರ್​ ರೈಫಲ್​ನಲ್ಲಿ ವಿಶ್ವಚಾಂಪಿಯನ್​ ಆಗಿರುವ ಮನು ಭಕೆರ್​ರ ಮೇಲೆ ಶೂಟಿಂಗ್​ನಲ್ಲಿ ಭಾರತಕ್ಕೆ 5 ನೇ ಪದಕ ತಂದುಕೊಡುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೆ ಈ ವಿಭಾಗದಲ್ಲಿ ರಾಜ್ಯವರ್ಧನ್​ ಸಿಂಗ್​ ರಾಥೋರ್​, ಅಭಿನವ್​ ಬಿಂದ್ರಾ, ಗಗನ್​ ನಾರಂಗ್​ ಮತ್ತು ವಿಜಯ್​ ಕುಮಾರ್​ ಪದಕ ತಂದುಕೊಟ್ಟಿದ್ದಾರೆ.

Tokyo Olympics
ಮನು ಭಕೆರ್​

4. ಮೀರಾಬಾಯಿ ಚಾನು

ಮಣಿಪುರದ ಸೈಕೋಮ್​ ಮೀರಾಬಾಯಿ ಚಾನು ಭಾರತಕ್ಕೆ 2018ರ ಕಾಮನ್​ ವೆಲ್ತ್​ ಗೇಮ್ಸ್​ನಲ್ಲಿ 48 ಕೆಜಿ ವಿಭಾಗದ ವೇಟ್​ಲಿಫ್ಟಿಂಗ್​ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದರು. ಮಾಜಿ ವಿಶ್ವಚಾಂಪಿಯನ್​ ಆಗಿರುವ ಇವರಿಂದ ಟೋಕಿಯೋ ಒಲಿಂಪಿಕ್​ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕ ತಂದುಕೊಡಬಲ್ಲ ಕ್ರೀಡಾಪಟುವಾಗಿದ್ದಾರೆ.

Tokyo Olympics
ಮೀರಾಬಾಯಿ

5. ವೀನೆಸ್​ ಪೊಗಾಟ್​

ರಿಯೋ ಒಲಿಂಪಿಕ್ಸ್​ನಲ್ಲಿ ಗಾಯದ ಕಾರಣ ಪದಕ ತಪ್ಪಿಸಿಕೊಂಡ ಪೊಗಾಟ್​, ನಂತರ ಎರಡು ಮೇಜರ್​ ಟೂರ್ನಿಗಳಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಪೊಗಾಟ್​ 2018ರಲ್ಲಿ ಏಷ್ಯನ್​ ಗೇಮ್ಸ್​ ಹಾಗೂ ಕಾಮನ್​ ವೆಲ್ತ್​ ಗೇಮ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇವರಿಂದಲೂ ಒಲಿಂಪಿಕ್ಸ್​ನಲ್ಲಿ ಒಂದು ಪದಕ ಭಾರತಕ್ಕೆ ಬರುವ ನಿರೀಕ್ಷೆಯಿದೆ.

Tokyo Olympics
ವೀನೆಸ್ ಪೊಗಾಟ್​​

6.ನೀರಜ್​ ಚೊಪ್ರಾ

21 ವರ್ಷದ ನೀರಜ್​ ಚೊಪ್ರಾ ಜಾವೆಲಿನ್​ ಥ್ರೋನಲ್ಲಿ 9ನೇ ಶ್ರೇಯಾಂಕದಲ್ಲಿದ್ದಾರೆ. ಚೊಪ್ರಾ 2018ರ ಏಷ್ಯನ್​ ಹಾಗೂ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇವರು ಕೂಡ ಭಾರತಕ್ಕೆ ಪದಕ ತಂದುಕೊಡಬಲ್ಲವರಲ್ಲಿ ಪ್ರಮುಖವಾಗಿದ್ದಾರೆ.

Tokyo Olympics
ನೀರಜ್​ ಚೊಪ್ರಾ

ಇದಲ್ಲದೆ ಕೆಲವು ರನ್ನರ್​ಗಳು ಕಳೆದ ಕೆಲವು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುತ್ತಿದ್ದು ಈ ಬಾರಿ ಪದಕ ತಂದುಕೊಟ್ಟರೂ ಆಶ್ಚರ್ಯವಿಲ್ಲ. ಆದರೆ ಈ ಮೇಲೆ ಉಲ್ಲೇಖಿಸಿರುವ 6 ಕ್ರೀಡಾಪಟುಗಳಿಂದ ಹೆಚ್ಚಿನ ನಿರೀಕ್ಷೆಯಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.