ಬ್ಯಾಂಕಾಕ್: ವಿಶ್ವದ ಮಾಜಿ ನಂಬರ್ ಒನ್ ಶಟ್ಲರ್ ಸೈನಾ ನೆಹ್ವಾಲ್ ಇಂದು ನಡೆದ ಥಾಯ್ಲೆಂಡ್ ಓಪನ್ನ ಮಹಿಳೆಯರ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ.
ಸೈನಾ ಇಂದಿನ ಪಂದ್ಯದಲ್ಲಿ ಥಾಯ್ಲೆಂಡ್ನ ಬುಸಾನನ್ ವಿರುದ್ಧ 23-21, 14-21, 16-21ರಲ್ಲಿ ಸೋಲು ಕಂಡರು. ಮೊದಲ ಗೇಮ್ನಲ್ಲಿ ಕಠಿಣ ಪೈಪೋಟಿ ನೀಡಿದ್ದ 2ನೇ ಗೇಮ್ನಲ್ಲಿ ಮತ್ತೆ ಕಮ್ಬ್ಯಾಕ್ ಮಾಡಿ ಪಂದ್ಯವನ್ನು ಮೂರನೇ ಗೇಮ್ಗೆ ಕೊಂಡೊಯ್ದರು. ಆದರೆ ನಿರ್ಣಾಯಕ ಗೇಮ್ನಲ್ಲಿ ಥಾಯ್ ಆಟಗಾರ್ತಿ ವಿರುದ್ಧ ರೋಚಕ ಸೋಲು ಕಂಡರು.
ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಕಿಸೋನ್ ಸೆಲ್ವದುರೇ ವಿರುದ್ಧ ಸುಲಭ ಜಯ ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದ್ದರು. ಸೈನಾ ಸೋಲಿನ ಮೂಲಕ ಟೂರ್ನಿಯಲ್ಲಿ ಭಾರತದ ಸಿಂಗಲ್ಸ್ ವಿಭಾಗದ ಸವಾಲು ಅಂತ್ಯವಾಗಿದೆ.
-
🇮🇳 @NSaina goes down in the R2️⃣ of #ThailandOpen2021 .
— BAI Media (@BAI_Media) January 14, 2021 " class="align-text-top noRightClick twitterSection" data="
Final score: 23-21, 14-21, 16-21
Tough luck, champ! #ThailandOpen2021 #ThailandOpenSuper1000 #badminton #HSBCbadminton pic.twitter.com/taAMvsY2kY
">🇮🇳 @NSaina goes down in the R2️⃣ of #ThailandOpen2021 .
— BAI Media (@BAI_Media) January 14, 2021
Final score: 23-21, 14-21, 16-21
Tough luck, champ! #ThailandOpen2021 #ThailandOpenSuper1000 #badminton #HSBCbadminton pic.twitter.com/taAMvsY2kY🇮🇳 @NSaina goes down in the R2️⃣ of #ThailandOpen2021 .
— BAI Media (@BAI_Media) January 14, 2021
Final score: 23-21, 14-21, 16-21
Tough luck, champ! #ThailandOpen2021 #ThailandOpenSuper1000 #badminton #HSBCbadminton pic.twitter.com/taAMvsY2kY
ಇದಕ್ಕೂ ನಡೆದ ಪಂದ್ಯಗಳಲ್ಲಿ ಕಿಡಂಬಿ ಶ್ರೀಕಾಂತ್ ವಾಕ್ ಓವರ್ ನೀಡಿದರೆ, ಸಾತ್ವಿಕ್- ಚಿರಾಗ್ ಜೋಡಿ ಇಂಡೋನೇಷ್ಯಾದ ಅಸನ್/ಸೆತಿಯಾವಾನ್ ಜೋಡಿ ವಿರುದ್ಧ ಸೋಲು ಕಂಡಿತ್ತು. ಇದೀಗ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮಾತ್ರ ಭಾರತದ ಪರ ಕಣದಲ್ಲಿ ಉಳಿದುಕೊಂಡಿದ್ದಾರೆ.
ಇದನ್ನು ಓದಿ:ಥಾಯ್ಲೆಂಡ್ ಓಪನ್ ಟೂರ್ನಿಯಿಂದ ಹೊರ ಬಿದ್ದ ಕಿಡಂಬಿ ಶ್ರೀಕಾಂತ್