ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಲೇಷ್ಯಾ ಸರ್ಕಾರ ಭಾರತದ ಪ್ರಯಾಣಿಕರಿಗೆ ನಿಷೇಧ ಹೇರಿದ ಬೆನ್ನಲ್ಲೇ ಭಾರತ ಮಲೇಷ್ಯಾ ಓಪನ್ನಿಂದ ಹಿಂದೆ ಸರಿದಿದೆ. ಇದರಿಂದ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಹಾದಿ ಮತ್ತಷ್ಟು ಕಠಿಣವಾಗಿದೆ.
" ಭಾರತೀಯ ಪ್ರಯಾಣಿಕರ ಮಲೇಷ್ಯಾ ಸರ್ಕಾರ ಮೇಲೆ ತಾತ್ಕಾಲಿಕ ನಿಷೇಧ ಹೇರಿರುವುದರಿಂದ ಮೇ 25 ರಿಂದ 30ರ ನಡೆಯಲಿರುವ ಮಲೇಷ್ಯಾ ಓಪನ್ನಿಂದ ಭಾರತ ಬ್ಯಾಡ್ಮಿಂಟನ್ ತಂಡ ಹಿಂದೆ ಸರಿದಿದೆ" ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಗುರುವಾರ ತಿಳಿಸಿದೆ.
ಒಲಿಂಪಿಕ್ಸ್ಗೆ ಅರ್ಹತೆ ಅಂಕವನ್ನು ಪಡೆದುಕೊಳ್ಳಲು ಮಲೇಷ್ಯಾ ಓಪನ್ ಕೊನೆಯ 2ನೇ ಟೂರ್ನಿಯಾಗಿದೆ. ಇದೀಗ ಭಾರತೀಯ ಆಟಗಾರರಿಗೆ ಜೂನ್ 1 ರಿಂದ 6ವರೆಗೆ ನಡೆಯಲಿರುವ ಸಿಂಗಾಪುರ್ ಓಪನ್ ಸೂಪರ್ 500 ಟೂರ್ನಿ ಮಾತ್ರ ಕೊನೆಯ ಅವಕಾಶವಾಗಿದೆ. ಸೈನಾ ಮತ್ತು ಶ್ರೀಕಾಂತ್ ಕನಿಷ್ಠಪಕ್ಷ ಫೈನಲ್ ಪ್ರವೇಶಿಸಿದರೆ ಮಾತ್ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲಿದ್ದಾರೆ. ಇಲ್ಲವಾದರೆ ಅವರ ಕನಸು ನುಚ್ಚುನೂರಾಗಲಿದೆ.
ಕ್ರೀಡಾ ಸಚಿವಾಲಯ ವಿದೇಶಾಂಗ ಇಲಾಖೆಯ ಮೂಲಕ ಭಾರತ ತಂಡ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಅನುಮತಿ ಕೋರಿ ಮಲೇಷ್ಯಾ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತಂಡದ ಪ್ರಯಾಣಕ್ಕೆ ಅನುಮತಿಯನ್ನು ನಿರಾಕರಿಸಿರುವುದಾಗಿ ಮಲೇಷ್ಯಾ ಸರ್ಕಾರ ಭಾರತೀಯ ಹೈಕಮಿಷನರ್‌ಗೆ ತಿಳಿಸಿದೆ" ಎಂದು ಬ್ಯಾಡ್ಮಿಟನ್ ಅಸೋಸಿಯೇಶನ್ ಆಫ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ:ಒಲಿಂಪಿಕ್ ಸಮಿತಿಯ 'ಬಿಲೀವ್ ಇನ್ ಸ್ಪೋರ್ಟ್ಸ್' ಅಭಿಯಾನಕ್ಕೆ ಪಿವಿ ಸಿಂಧು ರಾಯಭಾರಿ