ಬ್ಯಾಂಕಾಕ್: ಮಾಜಿ ವಿಶ್ವದ ನಂಬರ್ ಒನ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರು ಥಾಯ್ಲೆಂಡ್ ಓಪನ್ಗೂ ಮುನ್ನ ಅನೇಕ ಕೋವಿಡ್ 19 ಪರೀಕ್ಷೆಗಳಿಗೆ ಒಳಗಾದ ನಂತರ ಮೂಗಿನಲ್ಲಿ ರಕ್ತ ಬಂದಿದ್ದು, ಥಾಯ್ಲೆಂಡ್ ಓಪನ್‌ನಲ್ಲಿನ ಆರೋಗ್ಯ ಅಧಿಕಾರಿಗಳ ಕಳಪೆ ಚಿಕಿತ್ಸೆ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವು ನಮ್ಮನ್ನು ಕಾಪಾಡಿಕೊಳ್ಳುತ್ತಿರುವುದು ಇಲ್ಲಿ ಪಂದ್ಯಕ್ಕಾಗಿಯೇ ಹೊರೆತು ಈ ರೀತಿ ರಕ್ತ ಸುರಿಸುವುದಕ್ಕಲ್ಲ. ನಾನು ಇಲ್ಲಿಗೆ ಬಂದ ಮೇಲೆ 4 ಬಾರಿ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದೇನೆ. ಆದರೆ, ಇವುಗಳಲ್ಲಿ ಯಾವುದು ಸೌಹಾರ್ದಯುತವಾಗಿ ಕಾಣಲಿಲ್ಲ. ಈ ರೀತಿಯ ಚಿಕಿತ್ಸೆ ಸ್ವೀಕಾರಾರ್ಹವಲ್ಲ" ಎಂದು ಶ್ರೀಕಾಂತ್ ಟ್ವಿಟರ್ನಲ್ಲಿ ಮೂಗಿನಲ್ಲಿ ರಕ್ತ ಬಂದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಶ್ರೀಕಾಂತ್ ತಮ್ಮ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಸಮೀರ್ ವರ್ಮಾ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇದಕ್ಕು ಮುನ್ನ ಸೈನಾ ನೆಹ್ವಾಲ್ ಹಾಗೂ ಒಲಿಂಪಿಕ್ ಚಿನ್ನದ ಪದ ವಿಜೇತೆ ಕರೋಲಿನಾ ಮರಿನ್ ಕೂಡ ಆಹಾರ ವ್ಯವಸ್ಥೆ ಸೇರಿದಂತೆ ಕೆಲವು ಅವ್ಯವಸ್ಥೆಗಳ ವಿರುದ್ಧ ಥಾಯ್ ಬ್ಯಾಡ್ಮಿಂಟನ್ ಮತ್ತು ಬಿಡಬ್ಲ್ಯೂಎಫ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಮಂಗಳವಾರದಿಂದ ಥಾಯ್ಲೆಂಡ್ ಓಪನ್ ಆರಂಭಗೊಂಡಿದೆ. ಸೈನಾ ಕೋವಿಡ್-19 ಪಾಸಿಟಿವ್ಗೆ ತುತ್ತಾಗಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ರೆ, ಸಾಯಿ ಪ್ರಣೀತ್ ಮತ್ತು ಪಿ ವಿ ಸಿಂಧು ಮೊದಲ ಪಂದ್ಯದಲ್ಲೇ ಸೋತು ನಿರಾಶೆ ಅನುಭವಿಸಿದ್ದಾರೆ.
ಇದನ್ನು ಓದಿ:ಥಾಯ್ಲೆಂಡ್ ಓಪನ್: ಮೊದಲ ಸುತ್ತಿನಲ್ಲೇ ಹೊರಬಿದ್ದ ಪಿ.ವಿ.ಸಿಂಧು, ಸಾಯಿ ಪ್ರಣೀತ್