ಅಡೆನ್ಸ್(ಡೆನ್ಮಾರ್ಕ್): ಕೊರೊನಾ ವೈರಸ್ನ 7 ತಿಂಗಳ ದೀರ್ಘ ವಿರಾಮದ ನಂತರ ಬ್ಯಾಡ್ಮಿಂಟನ್ಗೆ ಮರಳಿರುವ ಭಾರತದ ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕೆನಡಾದ ಜೇಸನ್ ಆಂಥೋನಿ ಹೊ - ಶು ವಿರುದ್ಧ 21-15, 21-14ರಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ಗೆ ಎಂಟ್ರಿಕೊಟ್ಟರು. ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್ ಈ ಪಂದ್ಯವನ್ನು ಕೇವಲ 33 ನಿಮಿಷಗಳಲ್ಲಿ ಗೆದ್ದುಕೊಂಡರು.
ಕೋವಿಡ್ 19 ಕಾರಣದಿಂದ ಈ ವರ್ಷದಲ್ಲಿ ನಡೆಯುತ್ತಿರುವ ಏಕೈಕ ಟೂರ್ನಿಯಲ್ಲಿ ಉಳಿದಿರುವ ಶ್ರೀಕಾಂತ್ ಭಾರತದ ಪರ ಉಳಿದಿರುವ ಏಕೈಕ ಸ್ಟಾರ್ ಆಟಗಾರನಾಗಿದ್ದಾರೆ. ಸಿಂಧು, ಕಶ್ಯಪ್ ಹಾಗೂ ಸೈನಾ ನೆಹ್ವಾಲ್ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಯುವ ಆಟಗಾರ ಲಕ್ಷ್ಯ ಸೇನ್ ಕೂಡ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ವಿಶ್ವದ 14 ನೇ ಶ್ರೇಯಾಂಕದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಚೀನೀಸ್ ತೈಪೆ ಯ ಟಿಯೆನ್ ಚೆನ್ ಚೌ ಮತ್ತು ಐರ್ಲೆಂಡ್‌ನ ನಾಟ್ ಎನ್ಗುಯೆನ್ ವಿರುದ್ಧದ 2ನೇ ಸುತ್ತಿನಲ್ಲಿ ಗೆಲುವು ಸಾಧಿಸುವ ಆಟಗಾರನ ವಿರುದ್ಧ ಕಾದಾಡಲಿದ್ದಾರೆ.