ಬ್ಯಾಂಕಾಕ್ : ಒಲಿಂಪಿಕ್ ಚಾಂಪಿಯನ್ ಸ್ಪೇನಿನ ಕರೊಲಿನಾ ಮರಿನ್ ಮತ್ತು ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಥಾಯ್ಲೆಂಡ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
2016ರ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದ ಪಡೆದಿರುವ ಸ್ಪೇನ್‌ನ ಕರೊಲಿನಾ ಮರಿನ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತೈವಾನ್‌ನ ತಾಯ್ ಜು ಯಿಂಗ್ ಎದುರು 21-9, 21-16ರಲ್ಲಿ ಜಯ ಗಳಿಸಿ ಚಾಂಪಿಯನ್ ಆಗಿದ್ದಾರೆ. 27 ವರ್ಷದ ಮರಿನ್ ಕೇವಲ 42 ನಿಮಿಷಗಳಲ್ಲಿ ಯಾವುದೇ ಪ್ರತಿರೋಧವಿಲ್ಲದೆ ತೈವಾನ್ ಆಟಗಾರ್ತಿ ವಿರುದ್ಧ ಅರ್ಹ ಗೆಲುವು ಸಾಧಿಸಿದ್ದಾರೆ.
ಪುರುಷರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಡೆನ್ಮಾರ್ಕ್ ಶಟ್ಲರ್ ವಿಕ್ಟರ್ ಅಕ್ಸೆಲ್ಸನ್ 21-14, 21-14ರಲ್ಲಿ ಹಾಂಕಾಂಗ್‌ನ ಅಂಗಸ್ ಲಾಂಗ್ ವಿರುದ್ಧ ಸುಲಭದ ಜಯ ಸಾಧಿಸಿ 2021ರ ಮೊದಲ ಚಾಂಪಿಯನ್ಶಿಪ್ ಗೆದ್ದರು.
ಮಹಿಳೆಯರ ಡಬಲ್ಸ್‌ನಲ್ಲಿ ಇಂಡೊನೇಷ್ಯಾದ ಗ್ರೇಸಿಯಾ ಪೋಲಿ ಮತ್ತು ಅಪ್ರಿಯಾಣಿ ರಹಾಯು ಜೋಡಿ ಥಾಯ್ಲೆಂಡ್‌ನ ಜೊಂಗೊಲ್ಫಾನ್ ಮತ್ತು ರವಿಂಡ ಪ್ರಜೊಂಗ್ಜಯ್ ಅವರನ್ನು 21-15, 21-12ರಲ್ಲಿ ಮಣಿಸಿ ಪ್ರಶಸ್ತಿ ಗೆದ್ರೆ, ಪುರುಷರ ಡಬಲ್ಸ್‌ನಲ್ಲಿ ತೈವಾಬನ್ ಲೀ ಯಾಂಗ್ ಮತ್ತು ವಾಂಗ್ ಚಿ ಲಿನ್ ಮಲೇಷ್ಯಾದ ಗೊಹ್ ಶೆಮ್ ಮತ್ತು ಟ್ಯಾನ್ ವೀ ಕಿಯಾಂಗ್ 21-16, 21-23, 21-19ರಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಇದನ್ನು ಓದಿ:ಗಾಯ ಮೀರಿ ಹೋರಾಡುತ್ತಿರುವ ಭಾರತೀಯ ತಂಡದ ಸಾಧನೆಗೆ ಅಖ್ತರ್ ಶಹಬ್ಬಾಸ್‌ಗಿರಿ