ಹೋ ಚಿ ಮಿನ್ಹ್(ವಿಯೆಟ್ನಾಂ): ಭಾರತದ ಶಟ್ಲರ್ ಸೌರಭ್ ವರ್ಮಾ ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್ನ ಫೈನಲ್ನಲ್ಲಿ ಚೀನಾದ ಸನ್ ಫೀ ಕ್ಸಿಯಾಂಗ್ರನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸೌರಭ್ ವರ್ಮಾ 21-12, 17-21,21-14 ರಲ್ಲಿ ಕ್ಸಿಯಾಂಗ್ರನ್ನು ಮಣಿಸಿ ವರ್ಷದ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದರು. ವರ್ಮಾ ಕಳೆದ ಆಗಸ್ಟ್ನಲ್ಲಿ ಹೈದರಾಬಾದ್ ಓಪನ್ ಗೆದ್ದಿದ್ದರು.
-
@sourabhverma09 clinches 🥇!
— BAI Media (@BAI_Media) September 15, 2019 " class="align-text-top noRightClick twitterSection" data="
🇮🇳 shuttler #SourabhVerma goes all out to defeat 🇨🇳 #SunFeiXiang 2️⃣1️⃣ - 1️⃣2️⃣ 1️⃣7️⃣ - 2️⃣1️⃣ 2️⃣1️⃣ - 1️⃣4️⃣ and win🥇 #YonexSunrise Vietnam Open 2019
Congratulations Champion! 👏
Keep rising!#IndiaontheRise #Badminton pic.twitter.com/boZogIIrt7
">@sourabhverma09 clinches 🥇!
— BAI Media (@BAI_Media) September 15, 2019
🇮🇳 shuttler #SourabhVerma goes all out to defeat 🇨🇳 #SunFeiXiang 2️⃣1️⃣ - 1️⃣2️⃣ 1️⃣7️⃣ - 2️⃣1️⃣ 2️⃣1️⃣ - 1️⃣4️⃣ and win🥇 #YonexSunrise Vietnam Open 2019
Congratulations Champion! 👏
Keep rising!#IndiaontheRise #Badminton pic.twitter.com/boZogIIrt7@sourabhverma09 clinches 🥇!
— BAI Media (@BAI_Media) September 15, 2019
🇮🇳 shuttler #SourabhVerma goes all out to defeat 🇨🇳 #SunFeiXiang 2️⃣1️⃣ - 1️⃣2️⃣ 1️⃣7️⃣ - 2️⃣1️⃣ 2️⃣1️⃣ - 1️⃣4️⃣ and win🥇 #YonexSunrise Vietnam Open 2019
Congratulations Champion! 👏
Keep rising!#IndiaontheRise #Badminton pic.twitter.com/boZogIIrt7
ಪ್ರಶಸ್ತಿಗಾಗಿ ಕಠಿಣ ಪೈಪೋಟಿ ನೀಡಿದ್ದ ಚೀನಾದ ಕ್ಸಿಯಾಂಗ್ ಮೊದಲ ಗೇಮ್ ಕಳೆದುಕೊಂಡರೂ ಎರಡನೇ ಗೇಮ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ 21-17ರಿಂದ ಗೆದ್ದು ಟೈಬ್ರೇಕರ್ ಹಂತಕ್ಕೆ ತೆಗೆದುಕೊಂಡು ಹೋದರು. ಆದರೆ ಟೈ ಬ್ರೇಕರ್ನಲ್ಲಿ ಭಾರತದ ಆಟಗಾರ ಪರಾಕ್ರಮ ಮೆರೆದು ಪ್ರಶಸ್ತಿ ಬಾಚಿಕೊಂಡರು.
38 ನೇ ಶ್ರೇಯಾಂಕದ ಸೌರಭ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಮಿನೊರು ಕೊಗ್ ಅವರನ್ನು 22-20, 21-15 ರ ನೇರ ಸೆಟ್ಗಳಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು.