ನವದೆಹಲಿ: ವಿಶ್ವ ಚಾಂಪಿಯನ್ ಪಿವಿ ಸಿಂಧು ಮುಂಬರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಒತ್ತಡಕ್ಕೆ ಒಳಗಾಗಲಿದ್ದಾರೆ ಮತ್ತು ರಿಯೋ ಒಲಿಂಪಿಕ್ಸ್ನಂತೆ ಇಲ್ಲಿ ಪದಕ ಗೆಲ್ಲುವುದು ಸುಲಭವಲ್ಲ ಎಂದು ಮಾಜಿ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿದ್ದಾರೆ.
ಶತಕಕೋಟಿ ಭಾರತೀಯರಲ್ಲಿ ಒಲಿಂಪಿಕ್ಸ್ ಪದಕದ ನಿರೀಕ್ಷೆ ಹುಟ್ಟುಹಾಕಿರುವ ಕೆಲವು ಕ್ರೀಡಾಪಟುಗಳಲ್ಲಿ ಪಿವಿ ಸಿಂಧು ಅಗ್ರಸ್ಥಾನದಲ್ಲಿದ್ದಾರೆ. ಕೋವಿಡ್ 19 ಕಾರಣ ಪಿವಿ ಸಿಂದು ತರಬೇತಿಯ ಕೊರತೆಯುಂಟಾಗಿದೆ. ಹಾಗಾಗಿ ಮಹಾನ್ ಕ್ರೀಡಾಕೂಟದಲ್ಲಿ ಸಿಂಧು ಒತ್ತಡಕ್ಕೆ ಒಳಗಾಗಬಹುದು ಎಂದು ಜ್ವಾಲಾ ಅಭಿಪ್ರಾಯಪಟ್ಟಿದ್ದಾರೆ.
ಅವರು(ಸಿಂಧು) ಪದಕ ಗೆಲ್ಲಲಿದ್ದಾರೆ ಎಂಬ ಭರವಸೆಯಿದೆ. ಆದರೆ ಕಳೆದ ಒಲಿಂಪಿಕ್ಸ್ಗಿಂತಲೂ ಹೆಚ್ಚು ಒತ್ತಡಕ್ಕೆ ಒಳಗಾಗಲಿದ್ದಾರೆ, ರಿಯೋದಲ್ಲಿದ್ದ ಸನ್ನಿವೇಶವೇ ಸಂಪೂರ್ಣ ವಿಭಿನ್ನವಾಗಿತ್ತು. ಆದರೆ ಈಗಿನ ಸನ್ನಿವೇಶ ಬದಲಾಗಿದೆ, ಎಲ್ಲರ ಗಮನ ಅವರ ಮೇಲಿದೆ. ಹಾಗಾಗಿ ಅವರು ಒತ್ತಡವನ್ನು ಹೇಗೆ ಸಹಿಸಿಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ ಎಂದು ಭಾರತ ಬ್ಯಾಡ್ಮಿಂಟನ್ನ ನಿರೀಕ್ಷೆ ಚರ್ಚೆಯಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
" ಸಿಂಧು ನಿರೀಕ್ಷೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ರಿಯೋ ಸುಲಭವಾಗಿರಲಿಲ್ಲ, ಆದರೆ ಟೋಕಿಯೊ ಖಂಡಿತವಾಗಿಯೂ ಸುಲಭವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಅವರ ಆಟವನ್ನು ವೀಕ್ಷಿಸಲಿದ್ದಾರೆ ಎಂದು ಜ್ವಾಲಾ ಹೇಳಿದ್ದಾರೆ.
2ನೇ ಕೋವಿಡ್ 19 ಅಲೆ ಭಾರತೀಯ ಆಟಗಾರರ ಮೇಲೆ ಪರಿಣಾಮ ಬೀರಿದೆ, ಅವರು ಹೆಚ್ಚಿನ ಟೂರ್ನಮೆಂಟ್ಗಳಲ್ಲಿ ಭಾಗವಹಿಸದಂತೆ ಮಾಡಿದೆ. ಆದರೆ ಯುರೋಪ್ನಲ್ಲಿ ಕೆಲವು ಟೂರ್ನಿಗಳು ನಡೆದಿದ್ದು, ಅಲ್ಲಿನ ಆಟಗಾರರು ಇದರ ಅನುಕೂಲ ಪಡೆದುಕೊಂಡಿದ್ದಾರೆ.
ಇದನ್ನು ಓದಿ:ಒಲಿಂಪಿಕ್ ಬೌಂಡ್ ಅಥ್ಲೀಟ್ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು