ETV Bharat / sports

ಡಬ್ಲ್ಯೂಟಿಎಫ್​ ವಿಶ್ವ ಟೂರ್​ ಫೈನಲ್ಸ್​: ಭಾರತ ತಂಡದ ನೇತೃತ್ವ ವಹಿಸಲಿರುವ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು - ಲಕ್ಷ್ಯಸೇನ್​ ಸಾತ್ವಿಕ್​ ಚಿರಾಗ್​ ಮೇಲೆ ನಿರೀಕ್ಷೆ

ಇಂಡೋನೇಷ್ಯಾದಲ್ಲಿ ನಡೆಯುವ ಡಬ್ಲ್ಯೂಟಿಎಫ್​ ವಿಶ್ವ ಟೂರ್​ ಫೈನಲ್ಸ್​ನಲ್ಲಿ ಭಾರತದ 7 ಬ್ಯಾಡ್ಮಿಂಟನ್​ ಆಟಗಾರರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದು ಕ್ಯಾಲೆಂಡರ್​ ವರ್ಷದ ಕೊನೆಯ ಟೂರ್ನಿಯಾಗಿದೆ.

sindhu leads indias campaign
ಡ್ಮಿಂಟನ್​ ತಾರೆ ಪಿ.ವಿ. ಸಿಂಧು
author img

By

Published : Nov 30, 2021, 1:32 PM IST

ಬಾಲಿ(ಇಂಡೋನೇಷ್ಯಾ): ಇಂಡೋನೇಷ್ಯಾದಲ್ಲಿ ಬುಧವಾರದಿಂದ ಆರಂಭವಾಗುವ ಡಬ್ಲ್ಯೂಟಿಎಫ್​ ವಿಶ್ವ ಟೂರ್​ ಫೈನಲ್ಸ್​ನಲ್ಲಿ ಬ್ಯಾಡ್ಮಿಂಟನ್​ ತಾರೆ, ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ.

ಇತ್ತೀಚೆಗೆ ಉತ್ತಮ ಪ್ರದರ್ಶನ ತೋರುತ್ತಿರುವ ಲಕ್ಷ್ಯಸೇನ್​ ಮತ್ತು ಮಿಶ್ರ ಡಬಲ್ಸ್​ನ ಸಾತ್ವಿಕ್ ​ಸಾಯಿರಾಜ್​ ರಂಕಿರೆಡ್ಡಿ - ಚಿರಾಗ್​ ಶೆಟ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ವರ್ಷದ ಕೊನೆಯ ಪಂದ್ಯಾವಳಿ ಆಗಿರುವ ಡಬ್ಲ್ಯೂಟಿಎಫ್​ ವಿಶ್ವ ಟೂರ್​ ಫೈನಲ್ಸ್​ನಲ್ಲಿ ಭಾರತ ಉತ್ತಮ ಸಾಧನೆ ಮಾಡುವ ಮೂಲಕ 2021 ಅನ್ನು ಮುಗಿಸಲು ಸನ್ನದ್ಧವಾಗಿದೆ.

ಭಾರತದ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು 2018ರಲ್ಲಿ ಡಬ್ಲ್ಯೂಟಿಎಫ್​ ವಿಶ್ವ ಟೂರ್​ ಫೈನಲ್ಸ್​ ಕೂಟವನ್ನು ಗೆದ್ದ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ. 2020ರಲ್ಲಿ ಪೈನಲ್​ ಪ್ರವೇಶಿಸಿದ್ದ ಸಿಂಧು ಸೋಲನುಭವಿಸಿದ್ದರು.

ಇದೀಗ ಎ ಗುಂಪಿನಲ್ಲಿ ಅಗ್ರ ಶ್ರೇಯಾಂಕಿತೆಯಾಗಿರುವ ಥಾಯ್ಲೆಂಡ್‌ನ ಪೋರ್ನ್‌ಪಾವಿ ಚೊಚುವಾಂಗ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಿ ಶುಭಾರಂಭ ಮಾಡುವ ಇರಾದೆಯಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.