ETV Bharat / sports

World Championships: ಕ್ವಾರ್ಟರ್ ಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್ ಸಿಂಧು

ಗುರವಾರ ನಡೆದ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಶಟ್ಲರ್​ 21-14, 21-18ರಲ್ಲಿ ಥಾಯ್​ ಶಟ್ಲರ್​ ವಿರುದ್ಧ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಸುಲಭ ಜಯ ಸಾಧಿಸಿದರು. ಈ ಮೂಲಕ ಚೊಚುವಾಂಗ್​ ವಿರುದ್ಧ ಮುಖಾಮುಖಿಯಲ್ಲಿ 5-3ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು. ಅಲ್ಲದೇ ಈ ಋತುವಿನಲ್ಲಿ ಥಾಯ್​ ಆಟಗಾರ್ತಿ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

World Championships sindhu
ಕ್ವಾರ್ಟರ್ ಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್ ಸಿಂಧು
author img

By

Published : Dec 16, 2021, 5:05 PM IST

Updated : Dec 18, 2021, 3:00 PM IST

ವೆಲ್ವಾ(ಸ್ಪೇನ್​): ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಥಾಯ್ಲೆಂಡ್​ನ ಪಾರ್ನ್​ಪಾವೀ ಚೊಚುವಾಂಗ್​ ವಿರುದ್ಧ ನೇರ ಗೇಮ್​ಗಳ ಅಂತರದಲ್ಲಿ ಗೆಲ್ಲುವ ಮೂಲಕ ಬಿಡಬ್ಲ್ಯೂಎಫ್​ ವಿಶ್ವಚಾಂಪಿಯನ್​ಶಿಪ್​ನಲ್ಲಿ ಕ್ವಾರ್ಟರ್​ ಫೈನಲ್ಸ್ ತಲುಪಿದ್ದಾರೆ.

ಗುರವಾರ ನಡೆದ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದ ಭಾರತೀಯ ಶಟ್ಲರ್​ 21-14, 21-18ರಲ್ಲಿ ಥಾಯ್​ ಶಟ್ಲರ್​ ವಿರುದ್ಧ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಸುಲಭ ಜಯ ಸಾಧಿಸಿದರು. ಈ ಮೂಲಕ ಚೊಚುವಾಂಗ್​ ವಿರುದ್ಧ ಮುಖಾಮುಖಿಯಲ್ಲಿ 5-3ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು. ಅಲ್ಲದೇ ಈ ಋತುವಿನಲ್ಲಿ ಥಾಯ್​ ಆಟಗಾರ್ತಿ ವಿರುದ್ಧ ಕಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ವಿಶ್ವ ಟೂರ್​ ಫೈನಲ್ಸ್​ನ ಲೀಗ್​ ಮತ್ತು ಆಲ್​ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಸಿಂದು ಸೋಲು ಕಂಡಿದ್ದರು.

ಇನ್ನು ಎರಡು ಒಲಿಂಪಿಕ್ ಪದಕ ವಿಜೇತೆ ಸಿಂಧು 8ರ ಘಟ್ಟದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ತೈವಾನ್​ನ ತಾಯ್​ ಜು ಯಿಂಗ್​ ವಿರುದ್ಧ ಸೆಣಸಾಡಲಿದ್ದಾರೆ. ಯಿಂಗ್​ ಸ್ಕಾಟ್ಲೆಂಡ್​ನ ಕಿರ್ಸ್ಟಿ ಗಿಲ್ಮೋರ್​ ವಿರುದ್ಧ 21-10, 19-21, 21-11ರಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ.

ಮಹಿಳೆಯರ ಡಬಲ್ಸ್​ನಲ್ಲಿ ಸೋಲು

ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ ಮಹಿಳೆಯರ ಪ್ರೀ ಕಾರ್ಟರ್ ಫೈನಲ್​ನಲ್ಲಿ 6ನೇ ಶ್ರೇಯಾಂಕದ ಥಾಯ್ಲೆಂಡ್​ನ ಜೋಂಗ್‌ಕೋಲ್ಫಾನ್ ಕಿಟಿತಾರಾಕುಲ್ ಮತ್ತು ರವಿಂಡಾ ಪ್ರಜೊಂಗ್‌ಜೈ ವಿರುದ್ಧ 21-13, 21-15ರಲ್ಲಿ ಸೋಲು ಕಂಡರು.

ಇದನ್ನೂ ಓದಿ:ನೋ ಕಮೆಂಟ್ಸ್​, ಬಿಸಿಸಿಐ ಸೂಕ್ತ ರೀತಿಯಲ್ಲಿ ಇದನ್ನು ಡೀಲ್ ಮಾಡಲಿದೆ: ಕೊಹ್ಲಿ ಹೇಳಿಕೆಗೆ ಗಂಗೂಲಿ ಪ್ರತಿಕ್ರಿಯೆ

Last Updated : Dec 18, 2021, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.