ETV Bharat / sports

ಥಾಯ್ಲೆಂಡ್​ ಓಪನ್​: ಚೀನಾ ಮಣಿಸಿ ಚಾಂಪಿಯನ್​ ಆದ ಶ್ರೇಯಾಂಕ ರಹಿತ ಭಾರತದ ಭಲೇ ಜೋಡಿ!

ಥಾಯ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಶ್ರೇಯಾಂಕ ರಹಿತರಾಗಿ ಕಣಕ್ಕಿಳಿದಿದ್ದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಡಬಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

Satwik-Chirag
author img

By

Published : Aug 4, 2019, 8:52 PM IST

ಬ್ಯಾಂಕಾಕ್: ಥಾಯ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ನಿರೀಕ್ಷೆ ಮೂಡಿಸಿದ್ದವರು ಫೈನಲ್​ ಪ್ರವೇಶಿಸುವಲ್ಲಿ ವಿಫಲರಾದರೂ ಶ್ರೇಯಾಂಕರಹಿತರಾಗಿ ಕಣಕ್ಕಿಳಿದಿದ್ದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಡಬಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದ ಈ ಯುವ ಜೋಡಿ ಇದೇ ಮೊದಲ ಬಾರಿಗೆ ಥಾಯ್ಲೆಂಡ್​ ಬ್ಯಾಡ್ಮಿಂಟನ್ ಕೂಟದ ಡಬಲ್ಸ್ ವಿಭಾಗದಲ್ಲಿ​ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಚೀನಾದ ಲಿ ಜುನ್ ಹ್ಯೂ ಹಾಗೂ ಲಿಯು ಯೂ ಚೆನ್ ವಿರುದ್ಧ 21-19, 18-21 ಹಾಗೂ 21-18 ಅಂತರದಲ್ಲಿ ಗೆದ್ದು ಡಬಲ್ಸ್​ ಚಾಂಪಿಯನ್​ ಆಗಿದ್ದಾರೆ.

ಆರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್​ ಪಂದ್ಯ ಬರೋಬ್ಬರಿ 1 ಗಂಟೆ 2 ನಿಮಿಷ ನಡೆಯಿತು. ಕೊನೆಯಲ್ಲಿ ಭಾರತದ ಜೋಡಿ 2-1 ಸೆಟ್​ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಸೆಮಿಫೈನಲ್​ ಪಂದ್ಯದಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಜೋಡಿ ಕೊರಿಯಾದ ಕೋ ಸುಂಗ್ ಹ್ಯುನ್‌- ಶಿನ್ ಬೇಕ್ ಚಿಯೋಲ್ ಜೋಡಿಯನ್ನು 22-20, 24-22, 21-9 ರಲ್ಲಿ ಮಣಿಸಿ ಫೈನಲ್​ಗೇರಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.