ಪ್ಯಾರಿಸ್ : ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಒರ್ಲಿಯನ್ಸ್ ಮಾಸ್ಟರ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯವಾಗಿದೆ.
ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ನ ಲಿನೆ ಕ್ರಿಸ್ಟೋಫರ್ಸನ್ ವಿರುದ್ಧ 17-21,17-21ರ ಅಂತರದಿಂದ ಸೋಲು ಕಂಡಿದ್ದಾರೆ. 28 ನಿಮಿಷ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯ ವಿರುದ್ಧ ಲಿನೆ ಕೇವಲ 28 ನಿಮಿಷಗಳಲ್ಲಿ ಜಯಭೇರಿ ಬಾರಿಸಿದರು.
ಶ್ರೀಕಾಂತ್ಗೆ ಸೋಲು : ಸಿಂಗಲ್ಸ್ ವಿಭಾಗದಲ್ಲಿ ಭಾರತದ ನಂಬರ್ ಒನ್ ಆಟಗಾರನಾಗಿರುವ ಕಿಡಿಂಬಿ ಶ್ರೀಕಾಂತ್ 19-21, 17-21ರಲ್ಲಿ ವಿಶ್ವದ 47ನೇ ಶ್ರೇಯಾಂಕಿತ ಫ್ರಾನ್ಸ್‌ನ ತೋಮಾ ಜೂನಿಯರ್ ಪೊಪೊವ್ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದರು.
ದುರಾದೃಷ್ಟವೆಂದರೆ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ 23 ಟೂರ್ನಮೆಂಟ್ಗಳನ್ನಾಡಿದ್ದು, ಕನಿಷ್ಠ ಒಂದು ಟೂರ್ನಿಯಲ್ಲಿ ಫೈನಲ್ ತಲುಪಿಲ್ಲ. ಹಾಗೆಯೇ ಶ್ರೀಕಾಂತ್ ಈ ವರ್ಷ 6 ಟೂರ್ನಮೆಂಟ್ಗಳಲ್ಲಿ ಭಾಗವಹಿಸಿದ್ದು, ಕೇವಲ ಒಂದು ಟೂರ್ನಿಯಲ್ಲಿ ಸೆಮಿಫೈನಲ್ ಸಾಧನೆ ಮಾಡಿರುವುದೇ ಅವರ ಗರಿಷ್ಠ ಸಾಧನೆಯಾಗಿದೆ.
ಇದನ್ನು ಓದಿ:ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 23ನೇ ಸ್ಥಾನ ಪಡೆದ 19 ವರ್ಷದ ಲಕ್ಷ್ಯ ಸೇನ್!