ಹೈದರಾಬಾದ್: ಒಲಿಂಪಿಕ್ನಲ್ಲಿ ಪದಕ ಭರವಸೆ ಮೂಡಿಸಿರುವ ಸೈನಾ ನೆಹ್ವಾಲ್, ಸಾಯ್ ಪ್ರಣೀತ್ ಮತ್ತು ಕಿಡಂಬಿ ಶ್ರೀಕಾಂತ್ ಸೇರಿದಂತೆ ಭಾರತೀಯ ಬ್ಯಾಡ್ಮಿಂಟನ್ ತಂಡ, ಬಿಡಬ್ಲ್ಯೂಎಫ್ ತಂಡ ವಿಶ್ವ ಟೂರ್ ಸೂಪರ್ 1000 ಟೂರ್ನಿಗಳಿಗಾಗಿ ಭಾನುವಾರ ಥಾಯ್ಲೆಂಡ್ಗೆ ಹೊರಟಿದೆ.
ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಭಾನುವಾರ ಲಂಡನ್ನಿಂದ ಥಾಯ್ಲೆಂಡ್ಗೆ ಹಾರಿದ್ದಾರೆ. ಅವರು ಬ್ಯಾಂಕಾಕ್ ಮೂಲಕ ದೋಹ ತಲುಪಲಿದ್ದಾರೆ. ಸಿಂಧು ಕೂಡ ಕೊರೊನಾ ಬ್ರೇಕ್ನ ನಂತರ ಇದೇ ಮೊದಲ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಳೆದ ಮಾರ್ಚ್ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ರದ್ದಾದ ನಂತರ ಕೇವಲ ಡೆನ್ಮಾರ್ಕ್ ಓಪನ್, ಸಾರ್‌ಲಾರ್‌ಲಕ್ಸ್ ಸೂಪರ್ 100 ಟೂರ್ನಿಗಳು ಮಾತ್ರ ಆಯೋಜನೆಯಾಗಿದ್ದವು.
ಇದೀಗ ಎಲ್ಲರ ಕಣ್ಣು ಈ ಎರಡು ಸೂಪರ್ 1000 ಈವೆಂಟ್ಗಳ ಮೇಲೆ ಬಿದ್ದಿದೆ. ಜನವರಿ 12 ರಿಂದ 17ರವರೆಗೆ ಯೋನೆಕ್ಸ್ ಥಾಯ್ಲೆಂಡ್ ಓಪನ್ ಮತ್ತು ಟೊಯೊಟೊ ಥಾಯ್ಲೆಂಡ್ ಓಪನ್ ಜನವರಿ 19ರಿಂದ 24ರವರೆಗೆ ನಡೆಯಲಿದೆ.
ಹೆಚ್ಎಸ್ ಪ್ರಣಯ್, ಪರುಪಳ್ಳಿ ಕಶ್ಯಪ್, ಸಮೀರ್ ವರ್ಮಅ, ಧ್ರುವ್ ಕಪಿಲಾ, ಮನು ಅತ್ರಿ ಡಬಲ್ಸ್ ವಿಭಾಗದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ, ಆಶ್ವಿನ್ ಪೊನ್ನಪ್ಪ ಮತ್ತು ಎನ್ ಸಿಕ್ಕಿರೆಡ್ಡಿ ಥಾಯ್ಲೆಂಡ್ಗೆ ತೆರಳಿದ್ದಾರೆ.