ETV Bharat / sports

ಸಾಯಿ ಪ್ರಣೀತ್​ಗೂ ಸೋಲು... ಚೀನಾ ಓಪನ್​ನಲ್ಲಿ ಭಾರತದ ಸವಾಲು ಅಂತ್ಯ - ಚೀನಾ ಓಪನ್​ ಬ್ಯಾಡ್ಮಿಂಟನ್ ಚಾಂಪಿಯನ್​​ಶಿಪ್​

ಭಾರತದ ಸಾಯಿ ಪ್ರಣೀತ್​ ಡೆನ್ಮಾರ್ಕ್​ನ ಆ್ಯಂಡರ್ಸ್​ ಅ್ಯಂಟನ್ಸೆನ್​ ವಿರುದ್ಧ 20-22, 22-20, 21-16ರಲ್ಲಿ ಸೋಲು ಕಂಡಿದ್ದಾರೆ.

China Open. ಚೀನಾ ಓಪನ್
author img

By

Published : Nov 7, 2019, 4:06 PM IST

ಫುಜೋ(ಚೀನಾ): ಚೀನಾ ಓಪನ್​ನಲ್ಲಿ ಭಾರತದ ಕೊನೆಯ ಪದಕ ಭರವಸೆ ಮೂಡಿಸಿದ್ದ ಸಾಯಿ ಪ್ರಣೀತ್​ ಕೂಡ ಸೋಲುಕಾಣುವ ಮೂಲಕ ಸಿಂಗಲ್ಸ್​ ವಿಭಾಗದಲ್ಲಿ ಭಾರತ ನೀರಸ ಪ್ರದರ್ಶನ ತೋರಿ ಹೊರಬಿದ್ದಿದೆ.

ಪ್ರಣೀತ್​ ಡೆನ್ಮಾರ್ಕ್​ನ ಆ್ಯಂಡರ್ಸ್​ ಅ್ಯಂಟನ್ಸೆನ್​ ವಿರುದ್ಧ 20-22, 22-20, 21-16ರಲ್ಲಿ ಸೋಲು ಕಂಡರು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ವಿಶ್ವದ 25ನೇ ಶ್ರೇಯಾಂಕದ ಕಶ್ಯಪ್ ಕೂಡ ​7ನೇ ಶ್ರೇಯಾಂಕದ ಡೆನ್ಮಾರ್ಕ್​ನ ವಿಕ್ಟರ್​ ಅಕ್ಸೆಲ್ಸೆನ್​ ವಿರುದ್ಧ 43 ನಿಮಿಷದ ಕಾದಾಟದಲ್ಲಿ 13-21, 19-21 ರಿಂದ ಸೋಲನುಭವಿಸಿದ್ದರು.

ಒಟ್ಟಾರೆ ಸಿಂಗಲ್ಸ್​ನಲ್ಲಿ ಸ್ಪರ್ಧಿಸಿದ್ದ ಮಹಿಳಾ ವಿಭಾಗದಲ್ಲಿ ಪಿ. ವಿ. ಸಿಂಧು, ಸೈನಾ ಮತ್ತು ಪುರುಷರ ವಿಭಾಗದಲ್ಲಿ ಶ್ರೀಕಾಂತ್​, ಹೆಚ್ ​ಎಸ್​ ಪ್ರಣಯ್​, ಕಶ್ಯಪ್​ ಹಾಗೂ ಸಾಯಿ ಪ್ರಣೀತ್​ ಕ್ವಾರ್ಟರ್​ ಫೈನಲ್​ಗೂ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.​

ಮಿಕ್ಸ್​ ಡಬಲ್ಸ್​ನಲ್ಲೂ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಜೋಡಿ 21-23, 16-21 ರಲ್ಲಿ ದಕ್ಷಿಣ ಕೊರಿಯಾದ ಸೆವುಂಗ್‌ ಜೆ ಸಿಯೊ ಮತ್ತು ಚೇ ಯುಜುಂಗ್‌ ವಿರುದ್ಧ ಸೋಲನುಭವಿಸಿದರು.

ಡಬಲ್ಸ್​ ವಿಭಾಗದಲ್ಲಿ ಥಾಯ್ಲೆಂಡ್​ ಓಪನ್​ ಚಾಂಪಿಯನ್​ ಸಾಥ್ವಿಕ್​-ಚಿರಾಗ್​ ಶೆಟ್ಟಿ ಜೋಡಿ ಜಪಾನ್​ನ ಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ವಿರುದ್ಧ ಸೆಣಸಾಡಲಿದ್ದಾರೆ. ಇದೊಂದೇ ವಿಭಾಗದಲ್ಲಿ ಭಾರತ ಟೂರ್ನಿಯಲ್ಲಿ ಉಳಿದುಕೊಂಡಿದೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.