ETV Bharat / sports

ಹ್ಯಾಟ್ರಿಕ್ ಫೈನಲ್​ಗೇರಿದ ಬ್ಯಾಡ್ಮಿಂಟನ್ ತಾರೆ ಸಿಂಧು...ಚಿನ್ನಕ್ಕೆ ಮುತ್ತಿಕ್ಕಲು ಒಂದು ಹೆಜ್ಜೆಯಷ್ಟೇ ಬಾಕಿ

ಪಿ.ವಿ ಸಿಂಧು ಚೀನಾದ ಚೆನ್ ಯು ಫೀ ವಿರುದ್ಧ ಗೆಲುವು ಸಾಧಿಸುವ ಮೂಲಕ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ 5ನೇ ಪದಕ ಖಚಿತಪಡಿಸಿಕೊಂಡಿದ್ದಾರೆ.

P.V.Sindhu Enter the final shuttlers at #BWF World Championships
author img

By

Published : Aug 24, 2019, 5:33 PM IST

ಬಾಸೆಲ್​(ಸ್ವಿಟ್ಜೆರ್​ಲ್ಯಾಂಡ್​): ಭಾರತದ ನಂ.1 ಷಟ್ಲರ್​ ಪಿ.ವಿ.ಸಿಂಧು ಬಿಡಬ್ಲ್ಯೂಎಫ್​ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್​ನ ಸಿಂಗಲ್ಸ್ ವಿಭಾಗದಲ್ಲಿ ಇಂದು ನಡೆದ ಸೆಮಿಫೈನಲ್​​ನಲ್ಲಿ ಚೀನಾದ ಚೆನ್ ಯು ಫೀ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯವೂ ಸೇರಿ ಸಿಂಧು ಒಟ್ಟು ಮೂರು ಬಾರಿ ಫೈನಲ್​ಗೇರಿದಂತಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಿತ ಟೂರ್ನಿಗಳಲ್ಲಿ ಎರಡು ಬಾರಿ ಫೈನಲ್​ಗೇರಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದರು. ಈಗ ಮತ್ತೊಮ್ಮೆ ಫೈನಲ್ ಪ್ರವೇಶಿದ್ದು, ಇದರೊಂದಿಗೆ ಕೂಟದಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಚೆನ್ ಯು ಫೀ ಅವರ ವಿರುದ್ಧ 21-7, 21-14 ಪಾಯಿಂಟ್ಸ್​ಗಳ ಅಂತದಿಂದ ಸಿಂಧು ಜಯ ದಾಖಲಿಸಿದರು. 40 ನಿಮಿಷದಲ್ಲಿ ಮುಕ್ತಾಯಗೊಂಡ ಈ ಪಂದ್ಯ ನೋಡುಗರಲ್ಲಿ ರೋಮಾಂಚನ ಉಂಟು ಮಾಡಿತು. ಐದು ಪದಕಗಳನ್ನು ಗೆಲ್ಲುವ ಎರಡನೇ ಆಟಗಾರ್ತಿಯೂ ಆಗಿದ್ದಾರೆ.

ವೃತ್ತಿ ಜೀವನದ 5ನೇ ಪದಕ ಖಚಿತಪಡಿಸಿಕೊಂಡಿವ ಸಿಂಧು ಈ ಹಿಂದೆ 2017, 2018ರಲ್ಲಿ ಬೆಳ್ಳಿ ಮತ್ತು 2013, 2014ರಲ್ಲಿ ಕಂಚು ಜಯಿಸಿದ್ದರು. ನಾಳೆ (ಭಾನುವಾರ) ನಡೆಯಲಿರುವ ಫೈನಲ್​​ ಪಂದ್ಯದಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ ಸಿಂಧು. ರಚನೋಕ್​ ಅಥವಾ ಒಕುಹರಾತ್​​ ಅವರೊಂದಿಗೆ ಸೆಣಸಲಿದ್ದಾರೆ.

ನಿನ್ನೆ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಏಷ್ಯಾಡ್ ಸ್ವರ್ಣ ಪದಕ ವಿಜೇತೆ ಮತ್ತು ವಿಶ್ವ ಬ್ಯಾಡ್ಮಿಂಟನ್​ನಲ್ಲಿ 2ನೇ ಶ್ರೇಯಾಂಕ ಪಡೆದಿರುವ ಚೀನಾ ತೈಪೆಯ ತೈ ಜು ಯಿಂಗ್ ಎದುರು 12-21, 23-21, 21-19 ಪಾಯಿಂಟ್ಸ್​​ಗಳ ಅಂತರದಿಂದ ಜಯ ದಾಖಲಿಸಿ ಸೆಮಿಫೈನಲ್​ ಪ್ರವೇಶಿದ್ದರು.

Intro:Body:

Sindhu

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.