ETV Bharat / sports

ಒಲಿಂಪಿಕ್ ಸಮಿತಿಯ 'ಬಿಲೀವ್ ಇನ್ ಸ್ಪೋರ್ಟ್ಸ್'​ ಅಭಿಯಾನಕ್ಕೆ ಪಿವಿ ಸಿಂಧು ರಾಯಭಾರಿ

author img

By

Published : May 3, 2021, 8:54 PM IST

ಸಿಂಧು ಮತ್ತು ಲೀ ಕಳೆದ ವರ್ಷದ ಏಪ್ರಿಲ್‌ನಿಂದ ಬಿಡಬ್ಲ್ಯುಎಫ್‌ನ ' ಐ ಯಾಮ್ ಬ್ಯಾಡ್ಮಿಂಟನ್'(i am badminton) ಅಭಿಯಾನದ ರಾಯಭಾರಿಗಳೂ ಆಗಿದ್ದಾರೆ.

ಪಿವಿ ಸಿಂಧು ಬಿಲೀವ್ ಇನ್ ಸ್ಪೋರ್ಟ್ಸ್
ಪಿವಿ ಸಿಂಧು ಬಿಲೀವ್ ಇನ್ ಸ್ಪೋರ್ಟ್ಸ್

ಹೈದರಾಬಾದ್​: ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಶಟ್ಲರ್​ ಪಿವಿ ಸಿಂಧು ಮತ್ತು ವಿಶ್ವದ 11ನೇ ಶ್ರೇಯಾಂಕದ ಕೆನಾಡದ ಮಿಶೆಲ್​ ಲೀ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ' ಬಿಲೀವ್ ಇನ್ ಸ್ಪೋರ್ಟ್ಸ್' ಅಭಿಯಾನಕ್ಕೆ ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ತಿಳಿಸಿದೆ.

ಸಿಂಧು ಮತ್ತು ಲೀ ಕಳೆದ ವರ್ಷದ ಏಪ್ರಿಲ್‌ನಿಂದ ಬಿಡಬ್ಲ್ಯುಎಫ್‌ನ ' ಐ ಯಾಮ್ ಬ್ಯಾಡ್ಮಿಂಟನ್'(i am badminton) ಅಭಿಯಾನದ ರಾಯಭಾರಿಗಳೂ ಆಗಿದ್ದಾರೆ.

ಐಒಸಿಯಿಂದ ರಾಯಭಾರಿಯಾಗಿ ನೇಮಕಗೊಂಡಿರುವುದು ಗೌರವದ ಸಂಗತಿ. ಯಾವುದೇ ರೀತಿಯ ಮೋಸ ಅಥವಾ ಸ್ಪರ್ಧೆಯಲ್ಲಿ ತಾರತಮ್ಯದ ವಿರುದ್ಧ ಹೋರಾಟದಲ್ಲಿ ನಾನು ನನ್ನ ಸಹ ಕ್ರೀಡಾಪಟುಗಳೊಟ್ಟಿಗೆ ನಿಲ್ಲುತ್ತೇನೆ. ಈ ವಿಷಯದಲ್ಲಿ ಒಗ್ಗಟ್ಟಿನ ಮೂಲಕ ಬಲ ತೋರಿಸೋಣ' ಎಂದು ಸಿಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

" ಸಿಂಧು ತಮ್ಮ ಕ್ರೀಡೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ತೋರಿದ ಪ್ರಾಮಾಣಿಕತೆಯ ಆಟ, ನ್ಯಾಯಯುತ ಆಟವನ್ನು ಸಮರ್ಪಿಸಿರುವುದರ ಗುರುತಿಸುವಿಕೆಯಾಗಿದೆ " ಎಂದು ಬಿಎಐ(ಭಾರತೀಯ ಬ್ಯಾಟ್ಮಿಂಟನ್ ಒಕ್ಕೂಟ)ನ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಪ್ರಶಂಸಿಸಿದ್ದಾರೆ.

ಇದನ್ನು ಓದಿ:ಹೈದರಾಬಾದ್ ತಂಡದೊಂದಗಿನ ವಾರ್ನರ್​ ಸಂಬಂಧ ಈ ವರ್ಷವೇ ಕೊನೆ: ಭವಿಷ್ಯ ನುಡಿದ ಸ್ಟಾರ್ ವೇಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.