ಪ್ಯಾರಿಸ್ : ಭಾರತ ಯುವ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲಾ ಜೋಡಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒರ್ಲಿಯನ್ಸ್ ಮಾಸ್ಟರ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಕೇವಲ 35 ನಿಮಿಷಗಳಲ್ಲಿ ಇಂಗ್ಲೆಂಡ್ನ ಕಾಲುಮ್ ಹೆಮ್ಮಿಂಗ್ಸ್ ಮತ್ತು ಸ್ಟೆವೆನ್ ಸ್ಟಾಲ್ವುಡ್ ಜೋಡಿಯ ವಿರುದ್ಧ 21-17, 21-17ರಲ್ಲಿ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.
-
𝗛𝗜𝗦𝗧𝗢𝗥𝗜𝗖 𝗪𝗜𝗡🔥@Gkrishna_p & @VardhanPanjala become 🇮🇳's 1️⃣st Men's doubles pair in the history to reach The Finals of #OrleansMasters. They defeated 🏴's Callum Hemming & Steven Stallwood comfortably by 21-17, 21-17.
— BAI Media (@BAI_Media) March 27, 2021 " class="align-text-top noRightClick twitterSection" data="
Good job👏🏻#OrleansMasters2021 pic.twitter.com/xXOpHlwl1z
">𝗛𝗜𝗦𝗧𝗢𝗥𝗜𝗖 𝗪𝗜𝗡🔥@Gkrishna_p & @VardhanPanjala become 🇮🇳's 1️⃣st Men's doubles pair in the history to reach The Finals of #OrleansMasters. They defeated 🏴's Callum Hemming & Steven Stallwood comfortably by 21-17, 21-17.
— BAI Media (@BAI_Media) March 27, 2021
Good job👏🏻#OrleansMasters2021 pic.twitter.com/xXOpHlwl1z𝗛𝗜𝗦𝗧𝗢𝗥𝗜𝗖 𝗪𝗜𝗡🔥@Gkrishna_p & @VardhanPanjala become 🇮🇳's 1️⃣st Men's doubles pair in the history to reach The Finals of #OrleansMasters. They defeated 🏴's Callum Hemming & Steven Stallwood comfortably by 21-17, 21-17.
— BAI Media (@BAI_Media) March 27, 2021
Good job👏🏻#OrleansMasters2021 pic.twitter.com/xXOpHlwl1z
ಈ ಜೋಡಿ ಇದೇ ಮೊದಲ ಬಾರಿಗೆ ಡಬಲ್ಸ್ನಲ್ಲಿ ಜೊತೆಯಾಗಿ ಆಡುತ್ತಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿರುವ ಯುವ ಪ್ರತಿಭೆಗಳು ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ನ ಸೀನ್ ವೆಂಡಿ ಮತ್ತು ಬೆನ್ ಲೇನ್ ವಿರುದ್ಧ ಸೆಣಸಾಡಲಿದ್ದಾರೆ.
ಮಿಶ್ರ ಡಬಲ್ಸ್ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿಗೆ ಸೋಲು : ಮಿಶ್ರ ಡಬಲ್ಸ್ನಲ್ಲಿ ಹೊಸ ಜೊತೆಗಾರನೊಂದಿಗೆ ಕಣಕ್ಕಿಳಿದಿದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಸೆಮಿಫೈನಲ್ನಲ್ಲಿ ಡೆನ್ಮಾರ್ಡ್‌ನ ನಿಕ್ಲಾಸ್ ನೊಹ್ರ್ ಮತ್ತು ಅಮಾಲಿ ಮ್ಯಾಗ್ಲಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಕದನದಲ್ಲಿ ಸೋಲುಂಡರು.
ಅಶ್ವಿನಿ-ಧ್ರುವ್ ಕಪಿಲಾ ಜೋಡಿ 9-21,23-21-21-7ರ ಅಂತರದಲ್ಲಿ ಡ್ಯಾನೀಸ್ ಜೋಡಿಯ ಮುಂದೆ ಶರಣಾಗತರಾದರು. ಗೆದ್ದ ಸೆಟ್‌ನಲ್ಲಿ ಹೊರೆತುಪಡಿಸಿದರೆ, ಉಳಿದ ಎರಡು ಸೆಟ್‌ನಲ್ಲಿ ಭಾರತೀಯ ಜೋಡಿ ಸುಲಭವಾಗಿ ಸೋಲು ಕಂಡಿತು.
ಇದನ್ನು ಓದಿ:ಒರ್ಲಿಯನ್ಸ್ ಮಾಸ್ಟರ್ಸ್.. ಸೈನಾಗೆ ಸೋಲು, ಸಿಂಗಲ್ಸ್ನಲ್ಲಿ ಭಾರತೀಯರ ಸವಾಲು ಅಂತ್ಯ..