ಒರ್ಲಿಯನ್ಸ್ ಓಪನ್ : ಭಾರತದ ಯುವ ಜೋಡಿ ಕೃಷ್ಣಪ್ರಸಾದ್ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಒರ್ಲಿಯನ್ಸ್ ಓಪನ್ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಹೊರೆತಾಗಿಯೂ ಫೈನಲ್ನಲ್ಲಿ ಸೋಲುಂಡಿದ್ದಾರೆ.
ಇದೇ ಮೊದಲ ಬಾರಿಗೆ ಜೋಡಿಯಾಗಿ ಸ್ಪರ್ಧಿಸಿದ್ದ ಈ ಜೋಡಿ ಇಂಗ್ಲೆಂಡ್ನ ಸೀನ್ ವೆಂಡಿ ಮತ್ತು ಬೆನ್ ಲೇನ್ ವಿರುದ್ಧ 21-19,14-21,19-21ರಲ್ಲಿ ಸೋಲು ಕಂಡು ಚೊಚ್ಚಲ ಡಬಲ್ಸ್ ಟ್ರೋಫಿ ಮಿಸ್ ಮಾಡಿಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ ಭಾರತೀಯ ಜೋಡಿ 2ನೇ ಗೇಮ್ನಲ್ಲಿ ಸೋಲು ಕಂಡಿತು. ಆದರೆ, 3ನೇ ಗೇಮ್ನಲ್ಲಿ 19-18ರಲ್ಲಿ ಮುನ್ನಡೆ ಸಾಧಿಸಿದರಾದರೂ ಒತ್ತಡಕ್ಕೊಳಗಾಗಿ 19-21ರಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿದರು.
ಕನ್ನಡತಿ ಅಶ್ವಿನಿ ಪೊನ್ನಪ್ಪ ಜೋಡಿಗೆ ಸೋಲು : ಮಿಶ್ರ ಡಬಲ್ಸ್ನಲ್ಲಿ ಹೊಸ ಜೊತೆಗಾರನೊಂದಿಗೆ ಕಣಕ್ಕಿಳಿದಿದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಸೆಮಿಫೈನಲ್ನಲ್ಲಿ ಡೆನ್ಮಾರ್ಡ್‌ನ ನಿಕ್ಲಾಸ್ ನೊಹ್ರ್ ಮತ್ತು ಅಮಾಲಿ ಮ್ಯಾಗ್ಲಂಡ್ ವಿರುದ್ಧ ನಡೆದ ರೋಚಕ ಸೆಮಿಫೈನಲ್ ಕದನದಲ್ಲಿ ಸೋಲುಂಡರು.
ಅಶ್ವಿನಿ-ಧ್ರುವ್ ಕಪಿಲಾ ಜೋಡಿ 9-21,23-21-21-7ರ ಅಂತರದಲ್ಲಿ ಡ್ಯಾನೀಸ್ ಜೋಡಿಯ ಮುಂದೆ ಶರಣಾಗತರಾದರು. ಗೆದ್ದ ಸೆಟ್‌ನಲ್ಲಿ ಹೊರೆತುಪಡಿಸಿದರೆ, ಉಳಿದ ಎರಡು ಸೆಟ್‌ನಲ್ಲಿ ಭಾರತೀಯ ಜೋಡಿ ಸುಲಭವಾಗಿ ಸೋಲು ಕಂಡಿತು.
ಇದನ್ನು ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 10 ಸಾವಿರ ರನ್.. ಮಿಥಾಲಿ ರಾಜ್ ಸಾಧನೆ ಶ್ಲಾಘಿಸಿದ ಮೋದಿ