ಬ್ಯಾಂಕಾಕ್: ಕೋವಿಡ್ 19 ಅಂತಾರಾಷ್ಟ್ರೀಯ ಕ್ಯಾಲೆಂಡರ್ಗೆ ಅಡ್ಡಿಪಡಿಸಿದ ಸುಮಾರು 10 ತಿಂಗಳ ನಂತರ ಭಾರತದ ಸ್ಟಾರ್ ಶಟ್ಲರ್ಗಳಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಮಂಗಳವಾರದಿಂದ ಪ್ರಾರಂಭವಾಗುವ ಯೋನೆಕ್ಸ್ ಥೈಲ್ಯಾಂಡ್ ಓಪನ್ ಸೂಪರ್ 1000 ಟೂರ್ನಿಯಲ್ಲಿ ಮತ್ತೆ ಮರಳಲಿದ್ದಾರೆ.
ಒಲಿಂಪಿಕ್ ಸಿಲ್ವರ್ ಮೆಡಿಲಿಸ್ಟ್ ಆಗಿರುವ ಸಿಂಧು ಕಳೆದ ಎರಡು ತಿಂಗಳಿನಿಂದ ಲಂಡನ್ನಲ್ಲಿ ತರಬೇತಿ ಪಡೆದಿದ್ದು, ಉತ್ತಮ ಲಯದಲ್ಲಿದ್ದಾರೆ. ಆದರೆ ಸೈನಾ ಇತ್ತೀಚೆಗೆ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದು, ಸರಣಿಯಲ್ಲಿ ಕಠಿಣ ಪೈಪೋಟಿ ಎದುರಿಸಬೇಕಾಗಿದೆ.
ಜನವರಿ 12 - 17ರವರೆಗೆ ಯೋನೆಕ್ಸ್ ಥಾಯ್ಲೆಂಡ್ ಓಪನ್ ಮತ್ತು ಜನವರಿ 19ರಿಂದ 24ರವರೆಗೆ ಟೊಯೋಟೋ ಥಾಯ್ಲೆಂಡ್ ಓಪನ್ ಟೂರ್ನಮೆಂಟ್ ನಡೆಯಲಿದೆ.
ಮಂಗಳವಾರ ನಡೆಯಲಿರುವ ಯೋನೆಕ್ಸ್ ಥಾಯ್ಲೆಂಡ್ ಓಪನ್ನ ತಮ್ಮ ಮೊದಲ ಪಂದ್ಯದಲ್ಲಿ ಸಿಂಧು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ ಅವರನ್ನು ಮತ್ತು ಸೈನಾ ನೆಹ್ವಾಲ್ ಟೂರ್ನಿಯಲ್ಲಿ ಮಲೇಷ್ಯಾದ ಕಿಸೋನಾ ಸೆಲ್ವಾಡುರೆ ಸವಾಲನ್ನು ಎದುರಿಸಲಿದ್ದಾರೆ.
ಸಿಂಧು ಬ್ಲಿಚ್ಫೆಲ್ಡ್ ವಿರುದ್ಧ 3-0ಯಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿರುವುದರಿಂದ ಈ ಪಂದ್ಯದಲ್ಲಿ ಸುಲಭ ಜಯದ ನಿರೀಕ್ಷೆಯಲ್ಲಿದ್ದಾರೆ.