ETV Bharat / sports

ಮರಿನ್ ಮಣಿಸಿ ಡೆನ್ಮಾರ್ಕ್​ ಓಪನ್‌ ಗೆದ್ದ ಜಪಾನ್‌ನ ಒಕುಹರಾ ನಜೊಮಿ

ಇಂದು ನಡೆದ ಫೈನಲ್‌ ಪಂದ್ಯದಲ್ಲಿ ಒಕುಹರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನ್​ನ ಕ್ಯಾರೋಲಿನ ಮರಿನ್​ರನ್ನು 21-19, 21-17ರ ಪಾಯಿಂಟ್‌ಗಳ ಅಂತರದಲ್ಲಿ ಮಣಿಸಿ ಡೆನ್ಮಾರ್ಕ್​ ಚಾಂಪಿಯನ್ ಟ್ರೋಫಿ ಹಿಡಿದು ಸಂಭ್ರಮಿಸಿದರು.

ಒಕುಹರಾ ನಜೊಮಿ
ಒಕುಹರಾ ನಜೊಮಿ
author img

By

Published : Oct 18, 2020, 10:32 PM IST

ಡೆನ್ಮಾರ್ಕ್​: ಸತತ ಏಳು ಬಾರಿ ವಿವಿಧ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲುವಲ್ಲಿ ಎಡವುತ್ತಿದ್ದ ಜಪಾನ್‌ನ ಒಕುಹರಾ ನಜೊಮಿ ಕೊನೆಗೂ ಡೆನ್ಮಾರ್ಕ್​ ಓಪನ್ ಗೆಲ್ಲುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಂಡಿದ್ದಾರೆ.

ಒಕುಹರಾ ಇಂದು ನಡೆದ ಫೈನಲ್​ ಪಂದ್ಯದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಸ್ಪೇನ್​ನ ಕ್ಯಾರೋಲಿನ ಮರಿನ್ ಅವ​ರನ್ನು 21-19, 21-17ರ ಪಾಯಿಂಟುಗಳ ಅಂತರದಲ್ಲಿ ಸೋಲಿಸಿದರು.

ಈ ಮೂಲಕ 2018ರ ಬಳಿಕ ಪ್ರಮುಖ ಟ್ರೋಫಿಯೊಂದನ್ನು ಅವರು ಗೆದ್ದಿದ್ದಾರೆ. ನಜೋಮಿ ಕಳೆದ ಎರಡು ವರ್ಷಗಳಿಂದ ಸತತ ಏಳು ಟೂರ್ನಿಗಳಲ್ಲಿ ಫೈನಲ್ ತಲುಪಿದರೂ ಚಾಂಪಿಯನ್ ಪಟ್ಟಕ್ಕೇರುವುದರಲ್ಲಿ ವಿಫಲರಾಗುತ್ತಿದ್ದರು. ಆದರೆ ಈ ಬಾರಿ ಸ್ಪೇನ್‌ನ ಆಟಗಾರ್ತಿ ವಿರುದ್ಧ ಯಾವುದೇ ತಪ್ಪು ಮಾಡದೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.