ETV Bharat / sports

ಇಂಡೋನೇಷ್ಯಾ ಓಪನ್​ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಪಿವಿ ಸಿಂಧು

author img

By

Published : Jul 21, 2019, 8:46 PM IST

ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಪಟುವಾದ ಪಿವಿ ಸಿಂಧು ಇಂಡೋನೇಷ್ಯಾ ಓಪನ್‌ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Indonesia Open

ಜಕಾರ್ತ(ಇಂಡೋನೇಷ್ಯಾ): ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಪಟುವಾದ ಪಿವಿ ಸಿಂಧು ಇಂಡೋನೇಷ್ಯಾ ಓಪನ್‌ನಲ್ಲಿ ಜಪಾನಿನ ಅಕಾನೆ ಯಮಗುಚಿ ವಿರುದ್ಧ 21-15, 21-16 ಅಂತರದಲ್ಲಿ ಸೋಲನುಭವಿಸಿದ್ದಾರೆ.

ಫೈನಲ್​ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಯಮಗುಚಿ 5ನೇ ಶ್ರೇಯಾಂಕದ ಸಿಂಧು ವಿರುದ್ಧ ಎರಡೂ ಸೆಟ್​ಗಳಲ್ಲೂ ಪ್ರಾಬಲ್ಯ ಸಾಧಿಸಿದರು. ಈ ವರ್ಷ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್​ಗೇರಿದ್ದ ಸಿಂಧು ಚಾಂಪಿಯನ್​ ಆಗುವಲ್ಲಿ ಎಡವಿದರು. ಈ ಪಂದ್ಯಕ್ಕೂ ಮುನ್ನ ಸಿಂಧು ಯಮಗುಚಿ ವಿರುದ್ಧ 10-4 ರಲ್ಲಿ ಗೆಲುವಿನ ಅಂತರ ಕಾಯ್ದುಕೊಂಡಿದ್ದರು. ಆದರೆ ಈ ಬಾರಿ ಯಮಗುಚಿ ವಿರುದ್ಧ ಮಂಕಾದ ಸಿಂಧು ಎರಡೂ ಸೆಟ್​ಗಳಲ್ಲಿಯೂ ಪೈಪೋಟಿ ನೀಡದೆ ಶರಣಾಗಿ ಬೆಳ್ಳಿಪದಕಕ್ಕೆ ತೃಪ್ತಿಪಟ್ಟರು.

Indonesia Open
ಪಿವಿ ಸಿಂಧು ಹಾಗೂ ಯಮಗುಚಿ
ಸಿಂಧು ಸೆಮಿಫೈನಲ್​ನಲ್ಲಿ ಚೀನಾದ ಚೆನ್ ಯೂಫಿ ಅವರನ್ನು 21-19, 21-10 ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್​ಗೆ ತಲುಪಿದ್ದರು. ಯಮಗುಚಿ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್​ ಆಟಗಾರ್ತಿ ತಾಯ್​ ಜು ಯಿಂಗ್ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.