ETV Bharat / sports

ಸಾತ್ವಿಕ್-ಪೊನ್ನಪ್ಪ, ಸೈನಾಗೆ ಸೋಲು: ಥಾಯ್ಲೆಂಡ್ ಓಪನ್​ನಲ್ಲಿ ಮುಗಿದ ಭಾರತೀಯರ ಹೋರಾಟ - ಥಾಯ್ಲೆಂಡ್​ ಓಪನ್​ನಲ್ಲಿ ಭಾರತೀಯರ ಸವಾಲು ಅಂತ್ಯ

ಭಾರತದ ಪರ ಕೊನೆಯ ಸ್ಪರ್ಧಿಯಾಗಿದ್ದ ಸಾತ್ವಿಕ್ ಮತ್ತು ಪೊನ್ನಪ್ಪ ಜೋಡಿ 12-21, 17-21ರಲ್ಲಿ ಹಾಂಗ್‌ಕಾಂಗ್ ಜೋಡಿ ವಿರುದ್ಧ ನೇರ ಗೇಮ್​ಗಳ ಸೋಲು ಕಂಡು 10 ತಿಂಗಳ ಬಳಿಕ ನಡೆದ ಅಂತಾರಾಷ್ಟ್ರೀಯ ಟೂರ್ನಮೆಂಟ್​ನಲ್ಲಿ ಹೊರಬಿದ್ದರು.

ಸಾತ್ವಿಕ್-ಪೊನ್ನಪ್ಪ
ಸಾತ್ವಿಕ್-ಪೊನ್ನಪ್ಪ
author img

By

Published : Jan 14, 2021, 10:47 PM IST

ಬ್ಯಾಂಕಾಕ್: ಮಿಶ್ರ ಡಬಲ್ಸ್​ನಲ್ಲಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಹಾಂಗ್​ಕಾಂಗ್​ನ ಚಂಗ್ ತಾಕ್ ಚಿಂಗ್ ಮತ್ತು ಎನ್‌ಜಿ ವಿಂಗ್‌ ಯುಂಗ್‌ ಜೋಡಿಯ ವಿರುದ್ಧ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಭಾರತೀಯರ ಸವಾಲು ಮುಗಿಯಿತು.

ಭಾರತದ ಪರ ಕೊನೆಯ ಸ್ಪರ್ಧಿಯಾಗಿದ್ದ ಸಾತ್ವಿಕ್ ಮತ್ತು ಪೊನ್ನಪ್ಪ ಜೋಡಿ 12-21, 17-21ರಲ್ಲಿ ಹಾಂಗ್​ ಕಾಂಗ್ ಜೋಡಿ ವಿರುದ್ಧ ನೇರ ಗೇಮ್​ಗಳ ಸೋಲು ಕಂಡು 10 ತಿಂಗಳ ಬಳಿಕ ನಡೆದ ಅಂತಾರಾಷ್ಟ್ರೀಯ ಟೂರ್ನಿಯಿಂದ ಹೊರಬಿದ್ದರು.

ಇದಕ್ಕೂ ಮುನ್ನ ಗುರುವಾರ ಕಿಡಂಬಿ ಶ್ರೀಕಾಂತ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಂದರೆ ಒಲಿಂಪಿಕ್​ ಪದಕ ವಿಜೇತೆ ಸೈನಾ ನೆಹ್ವಾಲ್​ ಥಾಯ್ಲೆಂಡ್​ನ ಬುಸಾನನ್ ಒಂಗ್ ‌ಬಮ್ರಂಗ್‌ಫಾನ್ ವಿರುದ್ಧದ 23-21, 14-21, 16-21ರ ರೋಚಕ ಕದನದಲ್ಲಿ ಸೋಲು ಕಂಡರು.

ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯವಾನ್ ವಿರುದ್ಧ 21-19, 21-17ರಿಂದ ಸೋಲು ಕಂಡರು.

ಇದೇ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಒಲಿಂಪಿಕ್​ ಬಾಂಡ್​ ಸ್ಪರ್ಧಿಗಳಾದ ಪಿವಿ ಸಿಂಧು, ಸಾಯಿ ಪ್ರಣೀತ್​ ಮೊದಲ ಸುತ್ತಿನಲ್ಲೇ ಸೋತು ನಿರಾಶೆ ಅನುಭವಿಸಿದ್ದರು.

ಇದನ್ನು ಓದಿ:ಕೇರಳ ಪರ ಶತಕ ಸಿಡಿಸಿದ ಅಜರುದ್ದೀನ್​ಗೆ ಬಂಪರ್​: 1 ರನ್​ಗೆ 1,000 ರೂ.ನಂತೆ ಬಹುಮಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.