ETV Bharat / sports

ಭಾರತೀಯ ಬ್ಯಾಡ್ಮಿಂಟನ್​ ತಾರೆ ನಂದು ನಾಟೇಕರ್​ ವಿಧಿವಶ

ದೀರ್ಘಕಾಲದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಾರತದ ಬ್ಯಾಡ್ಮಿಂಟನ್​ ದಂತಕಥೆ ನಂದು ನಾಟೇಕರ್ ಅಸುನೀಗಿದ್ದಾರೆ. 100ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

Nandu Natekar dead
ನಂದು ನಾಟೆಕರ್
author img

By

Published : Jul 28, 2021, 1:49 PM IST

Updated : Jul 28, 2021, 2:00 PM IST

ಪುಣೆ (ಮಹಾರಾಷ್ಟ್ರ): ಭಾರತದ ಲೆಜೆಂಡ್​​ ಬ್ಯಾಡ್ಮಿಂಟನ್ ಆಟಗಾರ ನಂದು ನಾಟೇಕರ್ ಇಂದು ಕೊನೆಯುಸಿರೆಳೆದಿದ್ದಾರೆ. 1956ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಮೊದಲ ಭಾರತೀಯ ಕ್ರೀಡಾಪಟು ಇವರಾಗಿದ್ದರು.

88 ವರ್ಷದ ನಂದು ನಾಟೇಕರ್ ವಯೋ ಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದರು. ಇವರು ಸುಮಾರು 100ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ವಿಶ್ವ ಬ್ಯಾಡ್ಮಿಂಟನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದ ಇವರು, ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ್ದ ಅವರು, 15 ವರ್ಷಗಳ ವೃತ್ತಿ ಜೀವನದಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಜೊತೆಗೆ 1961ರಲ್ಲಿ ಪ್ರತಿಷ್ಠಿತ ಅರ್ಜುನ ಅವಾರ್ಡ್ ಸಹ ಪಡೆದಿದ್ದಾರೆ.

1951 ಮತ್ತು 1963 ರ ನಡುವೆ ಥಾಮಸ್ ಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿ 16 ಸಿಂಗಲ್ಸ್ ಪಂದ್ಯಗಳಲ್ಲಿ 12 ಮತ್ತು ಡಬಲ್ಸ್‌ನಲ್ಲಿ 16 ರಲ್ಲಿ 8 ಪಂದ್ಯಗಳನ್ನು ಗೆದ್ದಿದ್ದರು. 1959, 1961 ಮತ್ತು ಪಂದ್ಯಾವಳಿಯಲ್ಲಿ ದೇಶವನ್ನು ಮುನ್ನಡೆಸಿದ್ದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. 1965ರಲ್ಲಿ ಜಮೈಕಾದಲ್ಲಿ ನಡೆದ ಕಾಮನ್​​​​ವೆಲ್ತ್​ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಕೋವಿಡ್ ನಿಮಯಾನುಸಾರದಂತೆ ಅಂತಿಮ ವಿಧಿವಿಧಾನ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Last Updated : Jul 28, 2021, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.