ETV Bharat / sports

ಬ್ಯಾಡ್ಮಿಂಟನ್​ ತಾರೆ ಪಿ.ವಿ ಸಿಂಧುಗೆ ಜನ್ಮ ದಿನದ ಸಂಭ್ರಮ

ರಿಯೊ ಒಲಿಂಪಿಕ್ಸ್​ ಸಿಂಗಲ್ಸ್​ ಬೆಳ್ಳಿ ಪದಕ ವಿಜೇತೆ, ಬ್ಯಾಡ್ಮಿಂಟನ್​ ತಾರೆ ಪಿ.ವಿ ಸಿಂಧು ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.

Happy Birthday PV Sindhu:  India's Badminton World Champion turns 26
ಪಿ.ವಿ ಸಿಂಧುಗೆ ಜನ್ಮ ದಿನ
author img

By

Published : Jul 5, 2021, 9:25 AM IST

ಹೈದರಾಬಾದ್​: ಭಾರತದ ಬ್ಯಾಡ್ಮಿಂಟನ್​ ತಾರೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತದ ಬ್ಯಾಡ್ಮಿಂಟನ್​ ಶಕ್ತಿಯಾಗಿರುವ ಆಂಧ್ರ ಪ್ರದೇಶ ಮೂಲದ ಆಟಗಾರ್ತಿ ಸಿಂಧು 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ತಂದೆ ಪಿ.ವಿ ರಮಣ್ ಜೊತೆ ಪಿ.ವಿ ಸಿಂಧು
ತಂದೆ ಪಿ.ವಿ ರಮಣ್ ಜೊತೆ ಪಿ.ವಿ ಸಿಂಧು

ಕ್ರೀಡಾ ಜಗತ್ತಿನ ಶ್ರೇಷ್ಠ ಸಾಧಕಿ ಪುಸರ್ಲಾ ವೆಂಕಟ ಸಿಂಧು ಆಂಧ್ರ ಪ್ರದೇಶದ ಪಿ.ವಿ. ರಮಣ್​ ಹಾಗೂ ಪಿ.ವಿಜಯ ಅವರ ಪುತ್ರಿ. ಈ ಇಬ್ಬರು ಮಾಜಿ ವಾಲಿಬಾಲ್ ಆಟಗಾರರ ಕನಸಿನ ಕೂಸು ಸಿಂಧು. ವಾಲಿಬಾಲ್ ಆಟಗಾರರ ಪುತ್ರಿಯಾದರೂ ಕೂಡ ಸಿಂಧು ಮಾತ್ರ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಸಿಂಧು ಸಾಧನೆಗೆ ಬ್ಯಾಡ್ಮಿಂಟನ್​ ದಿಗ್ಗಜ ಗೋಪಿಚಂದ್ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.

Happy Birthday PV Sindhu:  India's Badminton World Champion turns 26
ಸೈನಾ ನೆಹ್ವಾಲ್​ ಜೊತೆ ಸಿಂಧು

2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್​ ಮಹಿಳೆಯರ ಸಿಂಗಲ್ಸ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು, 2017ರ ಏಪ್ರಿಲ್​ನಲ್ಲಿ 2ನೇ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್​ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದರೆ, ಸದ್ಯ 7ನೇ ಸ್ಥಾನದಲ್ಲಿದ್ದಾರೆ. ಸಿಂಧು 2019ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿಯಾಗಿದ್ದಾರೆ.

ಇದನ್ನೂ ಓದಿ: ಏರಿದ Petrol​-ಸ್ಥಿರತೆ ಕಾಪಾಡಿಕೊಂಡ Diesel: ಬೆಂಗಳೂರಲ್ಲಿ ಇಂಧನ ದರ ಎಷ್ಟು ಗೊತ್ತಾ?

2013ರ ಮಲೇಷಿಯನ್​ ಓಪನ್​ನಲ್ಲಿ ಚಿನ್ನ ಹಾಗೂ ಅದೇ ವರ್ಷಾಂತ್ಯದಲ್ಲಿ ಗುವಾಂಗ್‌ಝೌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. 2016ರ ಚೀನಾ ಓಪನ್ ಸೂಪರ್ ಸಿರೀಸ್​, 2017ರ ಇಂಡಿಯಾ ಓಪನ್, ಸೈಯದ್ ಮೋದಿ ಗ್ರ್ಯಾನ್​ಪ್ರಿ ಗೋಲ್ಡ್‌ ಪ್ರಶಸ್ತಿ, 2018ರ ಕಾಮನ್​​ವೆಲ್ತ್ ಕ್ರೀಡಾಕೂಟ ಮತ್ತು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ತಲಾ ಬೆಳ್ಳಿ ಪದಕ ಮತ್ತು ಉಬರ್ ಕಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಗುವಾಂಗ್‌ಝೌ ವಿಶ್ವ ಟೂರ್ ಫೈನಲ್‌, 2019ರಲ್ಲಿ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಗೆದ್ದಿದ್ದಾರೆ.

ಪಿ.ವಿ. ಸಿಂಧು

ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆಗೆ 2013ರಲ್ಲಿ ಅರ್ಜುನ ಪ್ರಶಸ್ತಿ, 2016ರಲ್ಲಿ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ, 2015ರಲ್ಲಿ ಪದ್ಮಶ್ರೀ ಹಾಗೂ 2020ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2018 ಮತ್ತು 2019ರ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟುಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಜುಲೈ 23ರಂದು ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸಿಂಧು ಭಾಗವಹಿಸಲಿದ್ದು, ಅವರ ಮೇಲೆ ಅಪಾರ ನಿರೀಕ್ಷೆ ಇದೆ.

ಇದನ್ನೂ ಓದಿ: ವಿಶ್ವ ಚಾಂಪಿಯನ್ ಪಿವಿ ಸಿಂಧು ಜತೆ ಈಟಿವಿ ಭಾರತ ಎಕ್ಸ್​ಕ್ಲ್ಯೂಸಿವ್​ ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.