ಪ್ಯಾರಿಸ್: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಫ್ರೆಂಚ್ ಓಪನ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ
ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ನಲ್ಲಿ ಅವರು ಕೇವಲ 16 ನಿಮಿಷಗಳಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ ಬಮ್ರುಂಗ್ಫಾನ್ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು. ಫೈನಲ್ಗಾಗಿ ಪಿ.ವಿ.ಸಿಂಧು, ವಿಶ್ವದ 15 ನೇ ಶ್ರೇಯಾಂಕಿತ ಜಪಾನ್ನ ಸಯಾಕಾ ತಕಹಶಿ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿರುವ ಲಕ್ಷ್ಯ ಸೇನ್ ಅವರು ಕ್ವಾರ್ಟರ್ ಫೈನಲ್ನಲ್ಲಿ 17-21, 15-21 ರಿಂದ ದಕ್ಷಿಣ ಕೊರಿಯಾದ ಹಿಯೊ ಕ್ವಾಂಘೀ ವಿರುದ್ಧ ಸೋತರು.