ETV Bharat / sports

ಫ್ರೆಂಚ್​ ಓಪನ್​: ಜಪಾನ್​ ಜೋಡಿಗೆ ಸೋಲುಣಿಸಿ ಫೈನಲ್​ ತಲುಪಿದ ಭಾರತ ತಂಡ - ಪ್ರೆಂಚ್​ ಓಪನ್​ ಫೈನಲ್​ಗೆ ಸಾಥ್ವಿಕ್​- ಚಿರಾಗ್​

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ರೆಂಚ್​ ಓಪನ್​ನಲ್ಲಿ ಭಾರತದ ಜೋಡಿ ಹಿರೊಯುಕಿ ಎಂಡೋ ಮತ್ತು ಯುಟಾ ವಾಟಾನಬೆ ಅವರನ್ನು 21-11, 25-23 ರಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದೆ.

French Open
author img

By

Published : Oct 27, 2019, 1:56 PM IST

ಪ್ಯಾರೀಸ್​: ಭಾರತದ ಘಟಾನುಘಟಿಗಳೇ ಫ್ರೆಂಚ್​ ಓಪನ್​ನಲ್ಲಿ ಸೋಲುಕಂಡು ನಿರಾಶೆ ಮೂಡಿಸಿದರೂ ಯುವ ಜೋಡಿ ಸಾಥ್ವಿಕ್ ಸಾಯಿರಾಜ್​​- ಚಿರಾಗ್​ ಶೆಟ್ಟಿ ಜೋಡಿ ಫೈನಲ್​ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ.

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ರೆಂಚ್​ ಓಪನ್​ನಲ್ಲಿ ಭಾರತೀಯ ಜೋಡಿ ಹಿರೊಯುಕಿ ಎಂಡೋ ಮತ್ತು ಯುಟಾ ವಾಟಾನಬೆ ಅವರನ್ನು 21-11, 25-23 ರಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದೆ. ಈ ಮೂಲಕ ಸೈನಾ ನೆಹ್ವಾಲ್​ ಹಾಗೂ ಕಿಡಂಬಿ ಶ್ರೀಕಾಂತ್​​ ನಂತರ ಫ್ರೆಂಚ್​ ಓಪನ್​ ಫೈನಲ್​ ಪ್ರವೇಶಿಸಿದ ದಾಖಲೆಗೆ ಪಾತ್ರರಾದರು. ಅಲ್ಲದೆ ಸಾಥ್ವಿಕ್​ - ಚಿರಾಗ್​ ಡಬಲ್ಸ್​ ವಿಭಾಗದಲ್ಲಿ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ ಭಾರತದ ಜೋಡಿ ಎನಿಸಿಕೊಂಡರು.

ಈ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ತಂದುಕೊಡಬಲ್ಲ ಆಟಗಾರರೆನಿಸಿಕೊಂಡಿದ್ದ ಪಿವಿ ಸಿಂಧು, ಸೈನಾ ನೆಹ್ವಾಲ್​ ಕ್ವಾರ್ಟರ್​ ಫೈನಲ್​ನಲ್ಲಿ ಸೋಲನುಭವಿಸಿ ನಿರಾಶೆ ಮೂಡಿಸಿದ್ದರು. ಇನ್ನು ಕಶ್ಯಪ್​, ಶ್ರೀಕಾಂತ್​ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಆದರೆ ಸಾಥ್ವಿಕ್​- ಚಿರಾಗ್​ ಶೆಟ್ಟಿ ಜೋಡಿ ಭಾರತಕ್ಕೆ ಪ್ರಶಸ್ತಿ ಆಸೆ ಮೂಡಿಸಿದೆ.

ವಿಶ್ವ ಚಾಂಪಿಯನ್​ಶಿಪ್​ ನಂತರ ಭಾರತದ ಯಾವೊಬ್ಬರೂ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಸಾಥ್ವಿಕ್​- ಚಿರಾಗ್​ ಫೈನಲ್​ ತಲುಪಿದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೊಂದು ಗೆಲುವು ಬೇಕಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.