ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ತನ್ನ ತರಬೇತಿಯ ಕಡೆ ಗಮನಹರಿಸುವ ಸಲುವಾಗಿ ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಗೆ ತೆರಳಿದ್ದಾರೆ ಎಂದು ಪಿ.ವಿ.ಸಿಂಧು ತಂದೆ ಪಿ.ವಿ.ರಮಣ ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಕೌಟುಂಬಿಕ ಸಮಸ್ಯೆಯ ಕಾರಣದಿಂದ ಪಿ.ವಿ.ಸಿಂಧು ಲಂಡನ್ಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ತಳ್ಳಿಹಾಕಿದ ಪಿ.ವಿ.ರಮಣ ಸಿಂಧು ಲಂಡನ್ಗೆ ತೆರಳಿರುವ ಉದ್ದೇಶವನ್ನು ಬಹಿರಂಗಪಡಿಸಿದರು.
ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ''ಇದೆಲ್ಲ ಸುಳ್ಳು. ಲಂಡನ್‌ನಲ್ಲಿ ಸಿಂಧು ಲಂಡನ್‌ನ ಗ್ಯಾಟೋರೇಡ್ ಸ್ಪೋರ್ಟ್ಸ್ ಸೈನ್ಸ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾರೆ. ಇಂತಹ ಹೇಳಿಕೆ ನೀಡಿದ್ದು ಯಾರು.? ಅವರ ಹೇಳಿಕೆ ಮೂಲವೇನು..? ವಿಶ್ವಾಸಾರ್ಹತೆಯೇನು.?'' ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಮುಂದುವರಿದಂತೆ ''ನಾನು ಕೆಲವು ದಿನಗಳ ಹಿಂದೆ ಲಂಡನ್ಗೆ ಬಂದಿದ್ದೇನೆ. ಜಿಎಸ್ಎಸ್ಐನಲ್ಲಿ ತರಬೇತಿಗಾಗಿ ನಾನು ಇಲ್ಲಿಗೆ ಬಂದಿದ್ದು, ನನ್ನ ಪೋಷಕರ ಅನುಮತಿಯಂತೆ ಇಲ್ಲಿಗೆ ಬಂದಿದ್ದು, ನನಗೂ ನನ್ನ ಕುಟುಂಬದ ನಡುವೆ ಯಾವುದೇ ಸಮಸ್ಯೆ ಇಲ್ಲ'' ಎಂದು ಪಿ.ವಿ.ಸಿಂಧು ಮಾಡಿದ್ದ ಟ್ವೀಟ್ ಅನ್ನು ಕೂಡಾ ಅವರು ಇದೇ ವೇಳೆ, ಉಲ್ಲೇಖಿಸಿದ್ದಾರೆ.
-
I came to London a few days back to work on my nutrtion and recovery needs with GSSI. Infact I have come here with the consent of my parents and absolutely they were no family rifts in this regard. pic.twitter.com/zQb81XnP88
— Pvsindhu (@Pvsindhu1) October 20, 2020 " class="align-text-top noRightClick twitterSection" data="
">I came to London a few days back to work on my nutrtion and recovery needs with GSSI. Infact I have come here with the consent of my parents and absolutely they were no family rifts in this regard. pic.twitter.com/zQb81XnP88
— Pvsindhu (@Pvsindhu1) October 20, 2020I came to London a few days back to work on my nutrtion and recovery needs with GSSI. Infact I have come here with the consent of my parents and absolutely they were no family rifts in this regard. pic.twitter.com/zQb81XnP88
— Pvsindhu (@Pvsindhu1) October 20, 2020
ನ್ಯಾಷನಲ್ ಕ್ಯಾಂಪ್ನಲ್ಲಿ ಸರಿಯಾದ ಸೌಲಭ್ಯಗಳು ನೀಡುತ್ತಿಲ್ಲ ಎಂಬ ಹೇಳಿಕೆ ಈ ಮೊದಲು ಪಿ.ವಿ.ಸಿಂಧು ಪ್ರತಿಕ್ರಿಯಿಸಿದ್ದು, ನನಗೆ ತರಬೇತುದಾರ ಗೋಪಿಚಂದ್ ಹಾಗೂ ಅಕಾಡೆಮಿಯ ತರಬೇತಿ ಸೌಲಭ್ಯಗಳ ಬಗ್ಗೆ ಆಕ್ಷೇಪಣೆಯಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.
-
Also I do not have any issues with my coach Mr Gopichand or the training facilities at the academy
— Pvsindhu (@Pvsindhu1) October 20, 2020 " class="align-text-top noRightClick twitterSection" data="
">Also I do not have any issues with my coach Mr Gopichand or the training facilities at the academy
— Pvsindhu (@Pvsindhu1) October 20, 2020Also I do not have any issues with my coach Mr Gopichand or the training facilities at the academy
— Pvsindhu (@Pvsindhu1) October 20, 2020
ಪಿ.ವಿ.ಸಿಂಧು ಜನವರಿ 12ರಿಂದ 17ರವರೆಗೆ ನಡೆಯಲಿರುವ ಏಷ್ಯಾ ಓಪನ್ನಲ್ಲಿ 1 ಹಾಗೂ ಜನವರಿ 19ರಿಂದ 24ರವರೆಗೆ ನಡೆಯಲಿರುವ ಏಷ್ಯಾ ಓಪನ್ನಲ್ಲಿ 2ರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.