ETV Bharat / sports

ಸರ್ಕಾರ ಅನುಮತಿ ನೀಡಿದರೆ ಇಂಡಿಯಾ ಓಪನ್​ ಆಯೋಜನೆಗೆ ಸಿದ್ದ ಎಂದ ಬಿಎಐ - ಕೋವಿಡ್​ -19

ಒಲಿಂಪಿಕ್ಸ್​ ಅರ್ಹತಾ ಟೂರ್ನಿಯೂ ಆಗಿರುವ ಇಂಡಿಯಾ ಓಪನ್​ 3 ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಈ ಟೂರ್ನಿ ನಡೆಸಲು ಸಮಯ ನಿಗದಿ ಮಾಡುವಂತೆ ಬಿಡಬ್ಲ್ಯೂಎಫ್​ ಬ್ಯಾಡ್ಮಿಂಟನ್​ ಫಡೆರೇಷನ್​ ಆಫ್​ ಇಂಡಿಯಾ(ಬಿಎಐ)ಗೆ ಪತ್ರಬರೆದಿತ್ತು.

ಇಂಡಿಯಾ ಓಪನ್​ 2020
ಇಂಡಿಯಾ ಓಪನ್​ 2020
author img

By

Published : Apr 29, 2020, 11:45 AM IST

Updated : Apr 29, 2020, 10:14 PM IST

ನವದೆಹಲಿ: ಕೋವಿಡ್​-19 ನಿಯಂತ್ರಣಕ್ಕೆ ಬಂದು, ಸರ್ಕಾರ ಅನುಮತಿ ನೀಡಿದರೆ ಇಂಡಿಯಾ ಓಪನ್​ ಬ್ಯಾಡ್ಮಿಂಟನ್​ ಕೂಟದ ಆತಿಥ್ಯ ವಹಿಸಲು ಬಿಎಐ ಸಿದ್ದವಿದೆ ಎಂದು ತಿಳಿಸಿದೆ.

ಒಲಿಂಪಿಕ್ಸ್​ ಅರ್ಹತಾ ಟೂರ್ನಿಯೂ ಆಗಿರುವ ಇಂಡಿಯಾ ಓಪನ್​ 3 ಕೋಟಿ ಬಹುಮಾನ ಮೊತ್ತವನ್ನು ಹೊಂದಿದೆ. ಈ ಟೂರ್ನಿ ನಡೆಸಲು ಸಮಯ ನಿಗದಿ ಮಾಡುವಂತೆ ಬಿಡಬ್ಲ್ಯೂಎಫ್​ ಬ್ಯಾಡ್ಮಿಂಟನ್​ ಫಡೆರೇಷನ್​ ಆಫ್​ ಇಂಡಿಯಾ(ಬಿಎಐ)ಗೆ ಪತ್ರಬರೆದಿತ್ತು.

ಇಂಡಿಯಾ ಓಪನ್​
ಇಂಡಿಯಾ ಓಪನ್​

ಇದಕ್ಕೆ ಉತ್ತರಿಸಿರುವ ಬಿಎಐ ಡಿಸೆಂಬರ್​ ಅಥವಾ ಜನವರಿ ತಿಂಗಳಲ್ಲಿ ಈ ಟೂರ್ನಿಯನ್ನು ನಡೆಸಲು ಸಿದ್ದವಿರುವುದಾಗಿ ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್​ ಕೆ ಸಿಂಘಾನಿಯಾ ಹೇಳಿದ್ದಾರೆ.

ಈಗಾಗಲೆ ಭಾರತದಲ್ಲಿ ನಡೆಯಬೇಕಿದ್ದ ಬಿಡಬ್ಲ್ಯೂಎಫ್ ಸೂಪರ್​-500 ಟೂರ್ನಿ ಕೂಡ ನವದೆಹಲಿಯಲ್ಲಿ ಮಾರ್ಚ್​ 24ರಿಂದ 29ರವರೆಗೆ ನಡೆಯಬೇಕಿತ್ತು. ಕೊರೊನಾ ಲಾಕ್​ಡೌನ್​ನಿಂದ ಈ ಟೂರ್ನಿ ರದ್ದಾಗಿತ್ತು.

ಕೋವಿಡ್-19 ರೋಗದಿಂದಾಗಿ ಜೂನ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಬೇಕಾಗಿದ್ದ ಯುಎಸ್‌ ಓಪನ್‌ ವಿಶ್ವ ಟೂರ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಕೂಟವನ್ನು ರದ್ದುಮಾಡಲಾಗಿದೆ ಎಂದು ಬ್ಯಾಡ್ಮಿಂಟನ್‌ ವಿಶ್ವ ಫೆಡರೇಶನ್‌ ತಿಳಿಸಿದೆ.

Last Updated : Apr 29, 2020, 10:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.