ETV Bharat / sports

BWF World Tour Finals: ಸೋತರೂ ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್

author img

By

Published : Dec 2, 2021, 7:45 PM IST

ಎ ಗುಂಪಿನಲ್ಲಿದ್ದ ಕೆಂಟೊ ಮೊಮೊಟ ಮತ್ತು ರಾಸ್ಮಸ್ ಗೆಮ್ಕೆ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದ ಕಾರಣ ಭಾರತೀಯ ಯುವ ಶಟ್ಲರ್​ ಸೆಮಿಫೈನಲ್ ಪ್ರವೇಶಿಸಿದ್ದಾರೆ.​

BWF World Tour Finals
ಸೆಮಿಫೈನಲ್ ಪ್ರವೇಶಿಸಿದ ಲಕ್ಷ್ಯ ಸೇನ್

ಬಾಲಿ(ಇಂಡೋನೇಷ್ಯಾ): ಭಾರತದ ಉದಯೋನ್ಮುಖ ಶಟ್ಲರ್​ ಲಕ್ಷ್ಯ ಸೇನ್ ಗುರುವಾರ ನಡೆದ ವಿಶ್ವ ಟೂರ್ ಫೈನಲ್ಸ್​ನ ಎ ಗುಂಪಿನ ಕೊನೆ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಆದರೂ ಸೆಮಿಫೈನಲ್​ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.

ಲಕ್ಷ್ಯ ಗುರುವಾರ ನಡೆದ ಒಲಿಂಪಿಕ್ ಚಾಂಪಿಯನ್​ ಡೆನ್ಮಾರ್ಕ್​ನ​ ವಿಕ್ಟರ್​ ಅಕ್ಸೆಲ್ಸನ್​ ವಿರುದ್ಧ 14-21, 15-21 ರ ನೇರ ಸೆಟ್​ಗಳಲ್ಲಿ ಸೋಲು ಕಂಡರು. ಎ ಗುಂಪಿನಲ್ಲಿದ್ದ ಕೆಂಟೊ ಮೊಮೊಟ ಮತ್ತು ರಾಸ್ಮಸ್ ಗೆಮ್ಕೆ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದ ಕಾರಣ ಭಾರತೀಯ ಯುವ ಶಟ್ಲರ್​ ಸೆಮಿಫೈನಲ್ ಪ್ರವೇಶಿಸಿದ್ದಾರೆ.​

ಇದಕ್ಕೂ ಮೊದಲು ಮಹಿಳೆಯರ ಸಿಂಗಲ್ಸ್​ನಲ್ಲಿ 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಜರ್ಮನಿಯ ಇವೋನ್ ಲೀ ವಿರುದ್ಧ 21-10, 21-13ರಲ್ಲಿ ಗೆದ್ದು ನಾಕೌಟ್ ಪ್ರವೇಶಿಸಿದರು. ಆದರೆ, ಪುರುಷರ ಸಿಂಗಲ್ಸ್​ನಲ್ಲಿ ಶ್ರೀಕಾಂತ್, ಡಬಲ್ಸ್​ನಲ್ಲಿ ಚಿರಾಗ್ ಶೆಟ್ಟಿ- ಸಾತ್ವಿಕ್ ಜೋಡಿ ಕೂಡ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

ಇದನ್ನೂ ಓದಿ:ಒಲಿಂಪಿಕ್ಸ್​ ಪದಕ ವಿಜೇತರನ್ನ ಬೆಳೆಸುವುದು ನನ್ನ ಗುರಿ: ಅಂಜು ಬಾಬಿ ಜಾರ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.