ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್ ಕಿಡಿಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಾಜಿ ವಿಶ್ವದ ನಂಬರ್ 1 ಶಟ್ಲರ್ ಶ್ರೀಕಾಂತ್ 62ನೇ ಶ್ರೇಯಾಂಕದ ಚೀನಾದ ಲೀ ಶೀಫೆಂಗ್ ವಿರುದ್ಧ 15-21, 21-18,21-17ರ ರೋಚಕ ಕದನದಲ್ಲಿ ಗೆಲುವು ಸಾಧಿಸಿದರು. 70 ನಿಮಿಷಗಳ ಕಾಲ ನಡೆದ ಈ ಕಾಳಗದಲ್ಲಿ ಮೊದಲು 21 ವರ್ಷದ ಆಟಗಾರನ ವಿರುದ್ಧ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಮೊದಲ ಗೇಮ್ ಕಳೆದುಕೊಂಡರೂ, ನಂತರದ 2 ಗೇಮ್ಗಳನ್ನು ಗೆದ್ದು 16ರ ಸುತ್ತಿಗೆ ತೇರ್ಗಡೆಯಾದರು.
ಇದಕ್ಕೂ ಮುನ್ನ ಪಿವಿ ಸಿಂಧು ಸ್ಲೊವಾಕಿಯಾದ ಮಾರ್ಟಿನಾ ರೆಪಿಸ್ಕಾ ವಿರುದ್ಧ 21-7, 21-9ರ ಪ್ರಾಬಲ್ಯಯುತ ಗೆಲುವು ಸಾಧಿಸಿದ್ದರು. ಎರಡು ಒಲಿಂಪಿಕ್ ಪದಕಗಳ ವಿಜೇತೆ ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪಾರ್ನ್ಪಾವೀ ಚೊಚುವಾಂಗ್ ವಿರುದ್ಧ ಸೆಣಸಾಡಲಿದ್ದಾರೆ.
ಜಪಾನ್ ಆಟಗಾರನಿಗೆ ವಿರೋಚಿತ ಸೋಲುಣಿಸಿದ ಲಕ್ಷ್ಯ
ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೇನ್ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಜಪಾನ್ನ ವಿಶ್ವದ 17ನೇ ಶ್ರೇಯಾಂಕ ಮತ್ತು ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದ ಕೆಂಟ ನಿಶಿಮೊಟೊ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ 22-20, 15-21, 21-18ರಲ್ಲಿ ಗೆದ್ದು ಬೀಗಿದರು.
ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಥಾಯ್ಲೆಂಡ್ನ ಲೀ ಹ್ಯೂಯ್- ಯಂಗ್ ಪೊ-ಹುಸಾನ್ ವಿರುದ್ಧ 27-25, 21-17ರಲ್ಲಿ ಗೆಲುವು ಸಾಧಿಸಿದರು.
ಇದನ್ನೂ ಓದಿ: World Championship: ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಸಿಂಧು, ಲಕ್ಷ್ಯ ಸೇನ್