ETV Bharat / sports

World Championship : ಸೆಮಿಯಲ್ಲಿ ಶ್ರೀಕಾಂತ್-ಲಕ್ಷ್ಯ ಸೆಣಸಾಟ : ಯಾರೇ ಗೆದ್ದರೂ ಭಾರತಕ್ಕೆ ಸಿಗಲಿದೆ ಐತಿಹಾಸಿಕ ಬೆಳ್ಳಿ ಪದಕ - ಪಿವಿ ಸಿಂಧು

ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ 5 ಪದಕ ಗೆದ್ದಿದ್ದರೆ, ಸೈನಾ ನೆಹ್ವಾಲ್​ ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕಂಚು ಗೆದ್ದಿದ್ದಾರೆ..

BWF World Championship semifina
ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್
author img

By

Published : Dec 18, 2021, 3:54 PM IST

ವೆಲ್ವಾ(ಸ್ಪೇನ್) : ಭಾರತದ ಸ್ಟಾರ್​ ಶಟ್ಲರ್​ ಶ್ರೀಕಾಂತ್​ ಮತ್ತು ಭವಿಷ್ಯದ ಸ್ಟಾರ್​ ಲಕ್ಷ್ಯ ಸೇನ್​ ಸ್ಪೇನ್​ ವೆಲ್ವಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್​ಶಿಪ್​ನ ಸೆಮಿಫೈನಲ್​​ನಲ್ಲಿ ಸೆಣಸಾಡಲಿದ್ದಾರೆ.

ಭಾರತೀಯ ಶಟ್ಲರ್​ಗಳು ಮಹತ್ವದ ಟೂರ್ನಾಮೆಂಟ್​ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿರುವುದರಿಂದ ಈಗಾಗಲೇ ಭಾರತಕ್ಕೆ ಎರಡು ಪದಕಗಳು ಖಚಿತವಾಗಲಿವೆ. ಇಂದಿನ ಪಂದ್ಯದಲ್ಲಿ ಗೆದ್ದವರೂ ಫೈನಲ್​ ಪ್ರವೇಶಿಸುವುದರಿಂದ ಕನಿಷ್ಠ ಬೆಳ್ಳಿ ಪದಕ ಕೂಡ ಖಚಿತವಾಗಲಿದೆ.

ಈ ಮೂಲಕ ಭಾರತದ ಬ್ಯಾಡ್ಮಿಂಟನ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ದೇಶಕ್ಕೆ ಸಿಗಲಿದೆ. ಅಲ್ಲದೆ ಪುರುಷರ ವಿಭಾಗದಲ್ಲಿ ನಾಲ್ಕನೇ ಪದಕ ಭಾರತಕ್ಕೆ ಸಿಗಲಿದೆ. 1983ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2019ರಲ್ಲಿ ಸಾಯಿ ಪ್ರಣೀತ್ ಮಾತ್ರ ಈ ಟೂರ್ನಿಯಲ್ಲಿ ಕಂಚು ಗೆದ್ದ ಸಾಧನೆ ಮಾಡಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಪದಕ ವಿಜೇತರು

ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ 5 ಪದಕ ಗೆದ್ದಿದ್ದರೆ, ಸೈನಾ ನೆಹ್ವಾಲ್​ ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ. ಮಹಿಳಾ ಡಬಲ್ಸ್​ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕಂಚು ಗೆದ್ದಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಕೆ ಎಲ್ ರಾಹುಲ್​ಗೆ ಭಾರತ ಟೆಸ್ಟ್​ ತಂಡದ ಉಪನಾಯಕನ ಪಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.