ನವದೆಹಲಿ: ಕೆಲವು ಪ್ರಮುಖ ರಾಷ್ಟ್ರಗಳು ಟೂರ್ನಿಯಿಂದ ಹಿಂದೆ ಸರಿದ ಬೆನ್ನಲ್ಲೇ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮಂಗಳವಾರ ಥಾಮಸ್ ಮತ್ತು ಉಬರ್ ಕಪ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.
2020ರ ಥಾಮಸ್ ಮತ್ತು ಉಬರ್ ಕಪ್ ಟೂರ್ನಿ ಡೆನ್ಮಾರ್ಕ್ ಮತ್ತು ಆರ್ಹಸ್ ಆಯೋಜನೆಯಲ್ಲಿ ಅಕ್ಟೋಬರ್ 3 ರಿಂದ 11ರವರೆಗೆ ನಡೆಯಬೇಕಿತ್ತು. ಆದರೆ ಡೆನ್ಮಾರ್ಕ್ನೊಂದಿಗೆ ಸಮಾಲೋಚನೆ ಮತ್ತು ಒಪ್ಪಂದದ ನಂತರ ಪಂದ್ಯವಾಳಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಬಿಬ್ಲ್ಯೂಎಫ್ ತಿಳಿಸಿದೆ.
'ಡೆನ್ಮಾರ್ಕ್ನ ಆರ್ಹಸ್‌ನಲ್ಲಿ ನಡೆಯಬೇಕಿದ್ದ ಬಿಡಬ್ಲ್ಯೂಎಫ್ ಥೋಮಸ್ ಮತ್ತು ಉಬರ್ ಕಪ್ ಫೈನಲ್ಸ್ 2020 ಅನ್ನು ಮುಂದೂಡಲು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಮತ್ತು ಡೆನ್ಮಾರ್ಕ್ ಆಯೋಜಕರು ನಿರ್ಧರಿಸಿದ್ದಾರೆ' ಎಂದು ಬಿಡಬ್ಲ್ಯೂಎಫ್ ಹೇಳಿಕೆಯ ಮೂಲಕ ತಿಳಿಸಿದೆ.
ಬಿಡಬ್ಲ್ಯೂಎಫ್ ಡೆನ್ಮಾರ್ಕ್ ಸಹಯೋಗದಿಂದ ಟೂರ್ನಿಗಾಗಿ ಕಳೆದ ಕೆಲವು ತಿಂಗಳಿನಿಂದ ತಯಾರಿ ನಡೆಸಿತ್ತು. ಆದರೆ ಕೊರೊನಾವೈರಸ್ ಭೀತಿಯ ಕಾರಣ ವಿಶ್ವದ ಪ್ರಮುಖ ಆಟಗಾರರು ಹಾಗೂ ಕೆಲವು ತಂಡಗಳು ಟೂರ್ನಿಯಲ್ಲಿ ಭಾಗವಹಿಸದಿರಲು ಡೆನ್ಮಾರ್ಕ್ಗೆ ಪ್ರಯಾಣ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಅಂತಿಮವಾಗಿ ಟೂರ್ನಿ ಮುಂದೂಡುವ ನಿರ್ಧಾರಕ್ಕೆ ಬಿಡ್ಲ್ಯೂಎಫ್ ಬಂದಿದೆ.
ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಚೀನೀಸ್ ತೈಪೆ, ಥೈಲ್ಯಾಂಡ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ದೇಶಗಳು ಥಾಮಸ್ ಮತ್ತು ಉಬರ್ಕಪ್ ಟೂರ್ನಿಯಿಂದ ಹಿಂದೆ ಸರಿದಿವೆ.