ನವದೆಹಲಿ: ಡೆನ್ಮಾರ್ಕ್ನ ಮಾಜಿ ಡಬಲ್ಸ್ ಸ್ಟಾರ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಮಥಿಯಾಸ್ ಬೋ ಅವರನ್ನು ಡಬಲ್ಸ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.
ಡಬಲ್ಸ್ ವಿಭಾಗದಲ್ಲಿ 10ನೇ ಶ್ರೇಯಾಂಕದಲ್ಲಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಬಹುದಿನದ ಬೇಡಿಕೆ ಮನ್ನಿಸಿರುವ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(TOPS) ಶುಕ್ರವಾರ ಡ್ಯಾನೀಸ್ ಆಟಗಾರನನ್ನು ಒಲಿಂಪಿಕ್ಸ್ಗಾಗಿ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
-
Exciting times for Indian Doubles!💪
— BAI Media (@BAI_Media) January 29, 2021 " class="align-text-top noRightClick twitterSection" data="
Welcome @mathiasboe. Looking forward.@himantabiswa @AJAYKUM78068675 #Badminton #BestofBadminton pic.twitter.com/xjOwwzy7Zp
">Exciting times for Indian Doubles!💪
— BAI Media (@BAI_Media) January 29, 2021
Welcome @mathiasboe. Looking forward.@himantabiswa @AJAYKUM78068675 #Badminton #BestofBadminton pic.twitter.com/xjOwwzy7ZpExciting times for Indian Doubles!💪
— BAI Media (@BAI_Media) January 29, 2021
Welcome @mathiasboe. Looking forward.@himantabiswa @AJAYKUM78068675 #Badminton #BestofBadminton pic.twitter.com/xjOwwzy7Zp
ಭಾರತದ ಡಬಲ್ಸ್ ತಂಡದ ನೂತನ ಕೋಚ್ ಸ್ಥಾನಕ್ಕೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಮಥಿಯಾಸ್ ಬೋ ಅವರನ್ನು ಸ್ವಾಗತಿಸುತ್ತಿದ್ದೇವೆ. ಅವರೊಬ್ಬ ಚಾಂಪಿಯನ್ ಆಟಗಾರ ಮತ್ತು ತಾವೂ ಆಡುತ್ತಿದ್ದ ವೇಳೆ ಹಲವಾರು ಡೆನ್ಮಾರ್ಕ್ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ ಅವರು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಆಡಿರುವುದರಿಂದ ಭಾರತೀಯ ಆಟಗಾರರಿಗೆ ತುಂಬಾ ಹತ್ತಿರವಾಗಿದ್ದಾರೆ. ಮಥಿಯಾಸ್ ಅವರ ಮೌಲ್ಯಯುತ ಅನುಭವ ಮತ್ತು ಮಾರ್ಗದರ್ಶನ ನಮ್ಮ ಆಟಗಾರರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಾವು ಭಾವಿಸಿದ್ದೇವೆ ಎಂದು ಸಿಂಘಾನಿಯ ತಿಳಿಸಿದ್ದಾರೆ.
ಚಿರಾಗ್ ಶೆಟ್ಟಿ ಮತ್ತು ರಾಂಕಿರೆಡ್ಡಿ ಟೋಕಿಯೋ ಒಲಿಂಪಿಕ್ಸ್ ರೇಸ್ನಲ್ಲಿದ್ದು, ಇತರೆ 16 ಜೋಡಿಗಳಲ್ಲಿ 9ನೇ ಶ್ರೇಯಾಂಕದಲ್ಲಿದ್ದಾರೆ. ಮಥಿಯಾಸ್ ಈ ಜೋಡಿಯ ಜೊತೆಗೆ ಟಾಪ್ಸ್ನಲ್ಲಿರುವ ಸಾತ್ವಿಕ್- ಅಶ್ವಿನಿ ಮತ್ತು ಅಶ್ವಿನಿ - ಸಿಕ್ಕಿ ರೆಡ್ಡಿ ಜೋಡಿಗೂ ತರಬೇತುದಾರರಿಗೆ ತಿಳಿಸಿದ್ದಾರೆ.
ಮಥಿಯಾಸ್ ಬೋ 2013ರ ವಿಶ್ವ ಚಾಂಪಿಯನ್ಸ್ಶಿಪ್ನಲ್ಲಿ ಬೆಳ್ಳಿ ಪದಕ , ಮತ್ತು 2011 ಹಾಗೂ 2015ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ಸ್ಶಿಪ್ ಗೆದ್ದಿದ್ದಾರೆ.
ಇದನ್ನು ಓದಿ:ಭಾರತ ವಿರುದ್ಧ ಟೆಸ್ಟ್ಸರಣಿಗಾಗಿ ಅಭ್ಯಾಸ ಆರಂಭಿಸಿದ ಆರ್ಚರ್, ಸ್ಟೋಕ್ಸ್, ಬರ್ನ್ಸ್