ETV Bharat / sports

BWF World Championships: ಶುಭಾರಂಭ ಮಾಡಿದ ಶ್ರೀಕಾಂತ್, ಮೊದಲ ಸುತ್ತಿನಲ್ಲೇ ಸೋತ ಪ್ರಣೀತ್ - ಹಾಲಿ ವಿಶ್ವ ಚಾಂಪಿಯನ್​ಶಿಪ್​ ಪಿವಿ ಸಿಂಧು

ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾದ ಶ್ರೀಕಾಂತ್ 11-2ರಲ್ಲಿ ಮುನ್ನಡೆ ಪಡೆದುಕೊಂಡರು. ಪಬ್ಲೋ ಕಮ್​ಬ್ಯಾಕ್​ ಮಾಡುವುದಕ್ಕೆ ಪ್ರಯತ್ನಿಸಿದರಾದರೂ ಭಾರತೀಯನ ವಿರುದ್ಧ 12-21 ರಲ್ಲಿ ಸೋಲು ಕಂಡರು.

BWF World Championships
ಕಿಡಂಬಿ ಶ್ರೀಕಾಂತ್​ಗೆ ಗೆಲುವು
author img

By

Published : Dec 13, 2021, 3:44 PM IST

Updated : Dec 18, 2021, 2:58 PM IST

ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್​ ಕಿಡಂಬಿ ಶ್ರೀಕಾಂತ್ ವಿಶ್ವ ಚಾಂಪಿಯನ್​ಶಿಪ್​ನ ಮೊದಲ ಪಂದ್ಯದಲ್ಲಿ ಸ್ಪೇನ್​​ನ ಪಬ್ಲೋ ಏಬಿಯನ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 28 ವರ್ಷದ ಶ್ರೀಕಾಂತ್​ ಏಬಿಯನ್ ವಿರುದ್ಧ 21-12, 21-16ರಲ್ಲಿ ಕೇವಲ 36 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.

ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾದ ಶ್ರೀಕಾಂತ್ 11-2ರಲ್ಲಿ ಮುನ್ನಡೆ ಪಡೆದುಕೊಂಡರು. ಪಬ್ಲೋ ಕಮ್​ಬ್ಯಾಕ್​ ಮಾಡುವುದಕ್ಕೆ ಪ್ರಯತ್ನಿಸಿದರಾದರೂ ಭಾರತೀಯನ ವಿರುದ್ಧ 12-21 ರಲ್ಲಿ ಸೋಲು ಕಂಡರು.

ಇನ್ನು ಎರಡನೇ ಗೇಮ್​ನಲ್ಲಿ ಸ್ಪೇನ್​ ಪ್ಲೇಯರ್​ ಉತ್ತಮ ಆರಂಭ ಪಡೆದರಾದರೂ ಶ್ರೀಕಾಂತ್​ ವಿರಾಮದ ವೇಳೆಗೆ ಸತತ 5 ಅಂಕಗಳನ್ನು ಪಡೆದು 11-7ರಲ್ಲಿ ಮುನ್ನಡೆ ಪಡೆದುಕೊಂಡರು. ನಂತರವೂ ತಮ್ಮ ಅಮೋಘ ಆಟ ಮುಂದುವರಿಸಿ 21-16ರಲ್ಲಿ 2ನೇ ಸೆಟ್​ ಗೆದ್ದರು. ಎರಡನೇ ಸುತ್ತಿನಲ್ಲಿ ಶ್ರೀಕಾಂತ್​ ಚೀನಾದ ಲಿ ಸೀ ಫೆಂಗ್​ ವಿರುದ್ಧ ಆಡಲಿದ್ದಾರೆ. ಲೀ ಅಮೆರಿಕಾದ ಟಿಮೋತಿ ವಿರುದ್ಧ ಲ್ಯಾಮ್ ವಿರುದ್ಧ 21-6, 21-10ರಲ್ಲಿ ಗೆಲುವು ಸಾಧಿಸಿದ್ದಾರೆ.

ಆದರೆ, ಕಳೆದ ಬಾರಿಯ ಕಂಚಿನ ಪದಕ ವಿಜೇತ ಸಾಯಿ ಪ್ರಣೀತ್ 28ನೇ ಶ್ರೇಯಾಂಕದ ಮಾರ್ಕ್​ ಕ್ಯಾಲ್ಜೋವ್​ ವಿರುದ್ಧ 21-17, 7-21, 18-21ರಲ್ಲಿ ಸೋಲು ಕಂಡರು. ಯುವ ಶಟ್ಲರ್​ ಲಕ್ಷ್ಯ ಸೇನ್ ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದು 2ನೇ ಸುತ್ತು ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್​ ಆಗಿರುವ ಪಿವಿ ಸಿಂಧು ಮಹಿಳೆಯರ ವಿಭಾಗದಲ್ಲಿ ಇಂದು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ಇದನ್ನೂ ಓದಿ:ಭಾರತ ತಂಡವನ್ನು ಕೊಹ್ಲಿ ಹಿಂದೆ ತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ: ರೋಹಿತ್ ಶರ್ಮಾ ಶ್ಲಾಘನೆ

Last Updated : Dec 18, 2021, 2:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.