ETV Bharat / sports

World Championship: ಪ್ರೀ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಸಿಂಧು, ಲಕ್ಷ್ಯ ಸೇನ್

ಸೋಮವಾರ ನಡೆದ ಪಂದ್ಯದಲ್ಲಿ ಸಿಂಧು ತನ್ನ ಎದುರಾಳಿಗೆ ಯಾವುದೇ ಅಂತದಲ್ಲಿ ತಿರುಗೇಟು ನೀಡಲು ಅವಕಾಶವನ್ನೇ ನೀಡಲಿಲ್ಲ. ಅವರು 21-7, 21-9ರ ಪ್ರಾಬಲ್ಯಯುತ ಗೆಲುವು ಸಾಧಿಸಿದರು.

Badminton Worlds
ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್​ಶಿಪ್
author img

By

Published : Dec 14, 2021, 4:48 PM IST

ನವದೆಹಲಿ: ಹಾಲಿ ಚಾಂಪಿಯನ್​​​​ ಪಿವಿ ಸಿಂಧು ಬಿಡಬ್ಲ್ಯೂಎಫ್​ ವಿಶ್ವ ಚಾಂಪಿಯನ್​ಶಿಪ್​ನ 2ನೇ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಿಯಾದ ಮಾರ್ಟಿನಾ ರೆಪಿಸ್ಕಾ ವಿರುದ್ಧ ನೇರ ಗೇಮ್​ಗಳ ಅಂತರದಿಂದ ಗೆಲುವು ಸಾಧಿಸಿ ಫ್ರಿ ಕ್ವಾರ್ಟರ್ ಫೈನಲ್​ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಸಿಂಧು ತನ್ನ ಎದುರಾಳಿಗೆ ಯಾವುದೇ ಅಂತದಲ್ಲಿ ತಿರುಗೇಟು ನೀಡಲು ಅವಕಾಶವನ್ನೇ ನೀಡಲಿಲ್ಲ. ಅವರು 21-7, 21-9ರ ಪ್ರಾಬಲ್ಯಯುತ ಗೆಲುವು ಸಾಧಿಸಿದರು.

ಆಗಸ್ಟ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ನಂತರ ಸಿಂಧು ಹಿಂತಿರುಗಿ ನೋಡೇ ಇಲ್ಲ. ಫ್ರೆಂಚ್ ಓಪನ್, ಇಂಡೋನೆಷ್ಯಾ ಓಪನ್, ಇಂಡೋನೆಷ್ಯಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದ ಅವರೂ ಕಳೆದ ವಾರ ವಿಶ್ವ ಟೂರ್​ ಫೈನಲ್ಸ್​ನಲ್ಲಿ ರನ್ನರ್​ ಅಪ್​ ಆಗಿದ್ದರು. ಇದೀಗ ತಮ್ಮ ಅದ್ಭುತ ಫಾರ್ಮ್​ ಮುಂದುವರಿಸಿದ್ದು, ಮತ್ತೊಂದು ವಿಶ್ವಚಾಂಪಿಯನ್​ಶಿಪ್​ ಮೆಡಲ್​ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಎರಡು ಒಲಿಂಪಿಕ್ ಪದಕಗಳ ವಿಜೇತೆ ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್​ನ ಪಾರ್ನ್​ಪಾವೀ ಚೊಚುವಾಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಜಪಾನ್ ಆಟಗಾರನಿಗೆ ವಿರೋಚಿತ ಸೋಲುಣಿಸಿದ ಲಕ್ಷ್ಯ

ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೇನ್​​ ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಜಪಾನ್​ನ ವಿಶ್ವದ 17ನೇ ಶ್ರೇಯಾಂಕ ಮತ್ತು ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದ ಕೆಂಟ ನಿಶಿಮೊಟೊ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ 22-20, 15-21, 21-18ರಲ್ಲಿ ಗೆದ್ದು ಬೀಗಿದರು.

​ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಥಾಯ್ಲೆಂಡ್​ನ ಲೀ ಹ್ಯೂಯ್- ಯಂಗ್ ಪೊ-ಹುಸಾನ್ ವಿರುದ್ಧ 27-25, 21-17ರಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ:ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರಾಡಲು ಇಷ್ಟವಿಲ್ವೆ?: ರೋಹಿತ್​-ಕೊಹ್ಲಿ ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.