ETV Bharat / sports

ಮಿಶ್ರ ಡಬಲ್ಸ್​​​ ರ‍್ಯಾಂಕಿಂಗ್​​: ಅಗ್ರ 20ಕ್ಕೆ ಕಾಲಿಟ್ಟ ಸೈರಾಜ್, ಅಶ್ವಿನಿ ಜೋಡಿ

ಮಿಶ್ರ ಡಬಲ್ಸ್​ ವಿಭಾಗದ ಜೋಡಿ ಸಾತ್ವಿಕ್​ ಸೈರಾಜ್​ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ವಿಶ್ವ ರ‍್ಯಾಂಕಿಂಗ್​​​ನ ಅಗ್ರ 20ಕ್ಕೆ ಪ್ರವೇಶಿಸಿದೆ.

Ashwini-Sairaj break into Top 20 in mixed doubles rankings
ಸೈರಾಜ್ ಅಶ್ವಿನಿ ಜೋಡಿ
author img

By

Published : Feb 2, 2021, 4:59 PM IST

ಬ್ಯಾಂಕಾಕ್​: ಷಟಲ್​ ಬ್ಯಾಡ್ಮಿಂಟನ್​ ಮಿಶ್ರ ಡಬಲ್ಸ್​ ವಿಭಾಗದ ಜೋಡಿ ಸಾತ್ವಿಕ್​ ಸೈರಾಜ್​ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಬ್ಯಾಡ್ಮಿಂಟನ್​ ವರ್ಲ್ಡ್​​ ಫೆಡರೇಷನ್​ (ಬಿಡಬ್ಲ್ಯುಎಫ್) ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರ 20ಕ್ಕೆ ಪ್ರವೇಶಿಸಿದ್ದಾರೆ.

ಸೈರಾಜ್​ ಮತ್ತು ಅಶ್ವಿನಿ ಅವರು 16 ಸ್ಥಾನಗಳ ಜಿಗಿತ ಕಾಣುವ ಮೂಲಕ ಹೊಸದಾಗಿ ಬಿಡುಗಡೆಯಾದ ರ‍್ಯಾಂಕಿಂಗ್​​ನಲ್ಲಿ 19 ಸ್ಥಾನಕ್ಕೆ ತಲುಪಿದ್ದಾರೆ. ಚೀನಾದ ಜೆಂಗ್​​ ಸಿ ಮತ್ತು ಹುವಾಂಗ್ ಯಾ ಜೋಡಿ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಥಾಯ್ಲೆಂಡ್​ನ ಸಪ್ಸಿರಿ ತೈರಟ್ಟನಾಚೈ ಮತ್ತು ಡೆಚಾಪೋಲ್ ಪುವಾರನುಕ್ರೊ ಜೋಡಿ ಒಂದು ಸ್ಥಾನ ಜಿಗಿತ ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದೆ.

ಈ ಜೋಡಿ ಮಿಶ್ರ ಡಬಲ್ಸ್​​​ನಲ್ಲಿ ಅಗ್ರ 20ಕ್ಕೆ ಪ್ರವೇಶಿಸಿದೆ. ಏಷ್ಯನ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನವೇ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ಅಭಿನಂದನೆಗಳು ಎಂದು ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಆಫ್​ ಇಂಡಿಯಾ (ಬಿಎಐ) ಟ್ವೀಟ್​​ ಮಾಡಿದೆ.

ಯೋನೆಕ್ಸ್​ ಥಾಯ್ಲೆಂಡ್ ಓಪನ್​ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ಸ್​​ಗೆ ತಲುಪಿದ ಸಂದರ್ಭದಲ್ಲಿ ಚೀನಾದ ಜೋಡಿ ಚಾಂಗ್ ತಕ್ ಚಿಂಗ್ ಮತ್ತು ಎನ್‌ಜಿ ವಿಂಗ್ ಯುಂಗ್ ವಿರುದ್ಧ ಸೋಲನುಭವಿಸಿದರು. ಆದರೆ, ಟಯೋಟಾ ಥಾಯ್ಲೆಂಡ್​ ಓಪನ್​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಸೈರಾಜ್​ ಮತ್ತು ಅಶ್ವಿನಿ ಜೋಡಿ ಥಾಯ್ಲೆಂಡ್​​​​ನ ಸಪ್ಸಿರಿ ತೈರಟ್ಟನಾಚೈ ಮತ್ತು ಡೆಚಾಪೋಲ್ ಪುವಾರನುಕ್ರೊ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾದರು.

ಪುರುಷರ ಸಿಂಗಲ್ಸ್​ ವಿಭಾಗದ ರ‍್ಯಾಂಕಿಂಗ್​​​​ನಲ್ಲಿ​ ಒಂದು ಸ್ಥಾನ ಜಿಗಿತ ಕಂಡಿರುವ ಕಿಡಂಬಿ ಶ್ರೀಕಾಂತ್​ ಅಗ್ರ 13ರಲ್ಲಿದ್ದಾರೆ. ಸಾಯಿ ಪ್ರಣೀತ್ ಒಂದು ಸ್ಥಾನದಿಂದ ಇಳಿದು 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ.ಸಿಂಧು ತನ್ನ ಏಳನೇ ಸ್ಥಾನವನ್ನು ಕಾಯ್ದುಕೊಂಡರೆ, ಸೈನಾ ನೆಹ್ವಾಲ್ ಕೂಡ ಒಂದು ಸ್ಥಾನ ಜಿಗಿತ ಕಂಡು 19ನೇ ಸ್ಥಾನದಲ್ಲಿದ್ದಾರೆ. ಪುರುಷರ ಮಿಶ್ರ ಡಬಲ್ಸ್​​ನಲ್ಲಿ ಚಿರಾಗ್​ ಶೆಟ್ಟಿ ಮತ್ತು ಸಾತ್ವಿಕ್​ ಸೈರಾಜ್​ ಜೋಡಿ 10ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.