ಭುವನೇಶ್ವರ: ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್‌ಗೆ ಒಡಿಶಾ ಸರ್ಕಾರ ರೂ.6 ಕೋಟಿ ನಗದು ಬಹುಮಾನ ಮತ್ತು ಗ್ರೂಪ್ ‘ಎ’ ಸರ್ಕಾರಿ ಉದ್ಯೋಗ ಪ್ರಕಟಿಸಿದೆ.
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಗತ್‌ಗೆ ಭವ್ಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಭಗತ್, 'ನಾನು ಈ ಪದಕವನ್ನು ಒಡಿಶಾ ರಾಜ್ಯ ಸೇರಿದಂತೆ ಎಲ್ಲಾ ಭಾರತೀಯರಿಗೆ ಅರ್ಪಿಸುತ್ತೇನೆ' ಎಂದು ಹೇಳಿದರು.
ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17ರ ನೇರ ಸೆಟ್‌ಗಳಿಂದ ಸೋಲಿಸಿದ್ದ ಪ್ರಮೋದ್ ಭಗತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ... ಮೆಂಟರ್ ಆಗಿ ಆಯ್ಕೆಯಾದ ಎಂಎಸ್ ಧೋನಿ