ETV Bharat / sports

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಹಾಕಿ ವೇಳಾಪಟ್ಟಿ ಬಿಡುಗಡೆ... ಭಾರತಕ್ಕೆ ಈ ಬಲಿಷ್ಠ ತಂಡ ಎದುರಾಳಿ - ಭಾರತದ ಪುರುಷರ ತಂಡಕ್ಕೆ ನ್ಯೂಜಿಲೆಂಡ್​ ಎದುರಾಳಿ

ಒಲಿಂಪಿಕ್ಸ್​ ಹಾಕಿ ಸ್ಪರ್ಧೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ಪುರುಷರ ತಂಡ ಜುಲೈ 25 ರಂದು ನ್ಯೂಜಿಲ್ಯಾಂಡ್​ ಎದುರಿಸಿದರೆ, ಮಹಿಳಾ ತಂಡ ನೆದರ್ಲೆಂಡ್ಸ್​ ತಂಡವನ್ನು ಎದುರಿಸಲಿದೆ.

2020 Tokyo Olympics hockey
2020 Tokyo Olympics hockey
author img

By

Published : Dec 17, 2019, 5:52 PM IST

ನವದೆಹಲಿ: ಭಾರತ ಹಾಕಿ ತಂಡ 2020ರ ಒಲಿಂಪಿಕ್ಸ್​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಮಂಗಳವಾರ ಒಲಿಂಪಿಕ್ಸ್​ ಹಾಕಿ ಸ್ಪರ್ಧೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ಪುರುಷರ ತಂಡ ಜುಲೈ 25 ರಂದು ನ್ಯೂಜಿಲ್ಯಾಂಡ್​ ಎದುರಿಸಿದರೆ, ಮಹಿಳಾ ತಂಡ ನೆದರ್ಲೆಂಡ್ಸ್​ ತಂಡವನ್ನು ಎದುರಿಸಲಿದೆ.

ಭಾರತ ತಂಡ ಹಾಲಿ ಒಲಿಂಪಿಕ್​ ಚಾಂಪಿಯನ್​ ಅರ್ಜೆಂಟಿನಾ, ವಿಶ್ವದ ನಂಬರ್​ ಒನ್​ ಆಸ್ಟ್ರೇಲಿಯಾ, ಸ್ಪೈನ್​, ನ್ಯೂಜಿಲ್ಯಾಂಡ್​ ಹಾಗೂ ಜಪಾನ್​ ತಂಡಗಳೊಂದಿಗೆ ಪೂಲ್​ ಎ ನಲ್ಲಿದೆ.

ಜುಲೈ 26ರಂದು ತನ್ನ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ, 28 ರಂದು ಸ್ಪೇನ್​​, ಜುಲೈ 30ರಂದು ಅರ್ಜೆಂಟಿನಾ ಹಾಗೂ ಜುಲೈ 31 ರಂದು ಜಪಾನ್​ ವಿರುದ್ಧ ಸೆಣಸಾಡಲಿದೆ. ಆಗಸ್ಟ್ 2 ಕ್ವಾರ್ಟರ್​ ಫೈನಲ್​ ನಡೆದರೆ, ಸೆಮಿಫೈನಲ್ ಪಂದ್ಯಗಳು ಆಗಸ್ಟ್​ 4 ರಂದು ನಡೆಯಲಿವೆ. ಆಗಸ್ಟ್​ 6 ರಂದು ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಹೋರಾಟ ನಡೆಯಲಿದೆ.

ಮಹಿಳೆಯರ ತಂಡ 27ರಂದು ಜರ್ಮನಿ, 29ರಂದ ಗ್ರೇಟ್​ ಬ್ರಿಟನ್​, 31 ರಂದು ಐರ್ಲೆಂಡ್​, ದಕ್ಷಿಣ ಆಫ್ರಿಕಾ ವಿರುದ್ಧ ಆಗಸ್ಟ್​ 1 ರಂದು ಸೆಣಸಾಡಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.