ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫ್ಯಾಮಿಲಿ ವಾರ್ ಸೀಸನ್ 2 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಯುಕ್ತಿ ನಾಯ್ಡು ತಮ್ಮ ವಿಭಿನ್ನ ಶೈಲಿಯ ನೃತ್ಯದ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿರುವುದು ಸುಳ್ಳಲ್ಲ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕನ ತಂಗಿ ಪ್ರಣತಿ ಆಗಿ ಮನೆ ಮಾತಾಗಿರುವ ಮುದ್ದು ಮುಖದ ಚೆಲುವೆಯ ಹೆಸರು ಯುಕ್ತಿ ನಾಯ್ಡು. ಬ್ರಹ್ಮಗಂಟು ಧಾರಾವಾಹಿಯಲ್ಲಿ ಪ್ರಣತಿ ಆಗಿ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆ ಯುಕ್ತಿ ಅದ್ಭುತ ನೃತ್ಯಗಾರ್ತಿಯೂ ಹೌದು.
- " class="align-text-top noRightClick twitterSection" data="
">
ಪ್ರತಿ ವಾರವೂ ವಿನೂತನ ಶೈಲಿಯ ನೃತ್ಯಗಳ ಮೂಲಕ ಗಮನ ಸೆಳೆದಿರುವ ಯುಕ್ತಿ, ತೀರ್ಪುಗಾರರಿಂದ ಮೆಚ್ಚುಗೆಯ ಮಾತುಗಳನ್ನು ಪಡೆಯುವುದು ಮಾಮೂಲು. ಆದರೆ ಅವರು ನೃತ್ಯವನ್ನು ಅದೆಷ್ಟು ಪ್ರೀತಿಯಿಂದ ಮಾಡುತ್ತಾರೆ ಎಂಬುದಕ್ಕೆ ಅವರ ಈ ವಾರದ ಪರ್ಫಾಮೆನ್ಸ್ ಸಾಕ್ಷಿ. ಕಳೆದ ಎಲ್ಲಾ ವಾರಗಳಂತೆ ಈ ವಾರವೂ ಕೂಡಾ ಅವರು ಬಹಳ ಚೆನ್ನಾಗಿಯೇ ಡ್ಯಾನ್ಸ್ ಮಾಡಿದ್ದಾರೆ ನಿಜ. ಆದರೆ ಈ ವಾರ ಅವರ ಎಡ ಕೈಗೆ ಪೆಟ್ಟಾಗಿತ್ತು. ಕೈಗೆ ಪ್ಲಾಸ್ಟರ್ ಹಾಕಿಕೊಂಡಿದ್ದ ಯುಕ್ತಿ, ಸ್ಟೇಜ್ ಮೇಲೆ ಬಂದದ್ದೇ ತಡ, ಸಂಪೂರ್ಣ ನೃತ್ಯದೊಳಗೆ ಮುಳುಗಿ ಹೋದರು. ಅವರ ಈ ಅದ್ಭುತ ನೃತ್ಯಕ್ಕೆ ತೀರ್ಪುಗಾರರೇ ಸೋತು ಹೋಗಿದ್ದರು. ಕೈಗೆ ಆದ ಗಾಯವನ್ನು ಲೆಕ್ಕಿಸದೆ, ನೃತ್ಯದ ಮೂಲಕ ಮನರಂಜನೆ ನೀಡಿದ ಯುಕ್ತಿ ನಾಯ್ಡು ಅವರ ಡೆಡಿಕೇಶನ್ಗೆ ಇಡೀ ಪ್ರೇಕ್ಷಕ ವರ್ಗವೇ ಬೆರಗಾಗಿ ಹೋಗಿದೆ. ತಮ್ಮ ಡ್ಯಾನ್ಸಿಂಗ್ ಪಾರ್ಟ್ನರ್ ತೇಜಸ್ ಜೊತೆ 'ಬಣ್ಣದ ಗೆಜ್ಜೆ' ಚಿತ್ರದ ಸ್ವಾತಿ ಮುತ್ತಿನ ಮಳೆಹನಿಯೇ ಹಾಡಿಗೆ ಯುಕ್ತಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.