ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ'ಯಶಸ್ವಿ 50 ಸಂಚಿಕೆಗಳನ್ನು ಪೂರೈಸಿದೆ. 50 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಧಾರಾವಾಹಿ ತಂಡ ಶೂಟಿಂಗ್ ನಡುವೆ ಕೊಂಚ ಬ್ರೇಕ್ ಪಡೆದು ಈ ಸಂತಸವನ್ನು ಆಚರಿಸುವ ಮೂಲಕ ಸಂಭ್ರಮಿಸಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್. ನಾರಾಯಣ್ ಎರಡನೇ ಪುತ್ರ!
'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿ ತಂಡದ ಎಲ್ಲಾ ಕಲಾವಿದರು ಹಾಗೂ ಸಿಬ್ಬಂದಿವರ್ಗ, ಸೆಟ್ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಡಗರ ಆಚರಿಸಿದೆ. ಶರಣ ಸಂತ ಯಡಿಯೂರು ಶ್ರೀಸಿದ್ದಲಿಂಗೇಶ್ವರರ ಬದುಕನ್ನು ಈ ಧಾರಾವಾಹಿ ಆಧರಿಸಿದೆ. ಸಿದ್ಧಲಿಂಗೇಶ್ವರರು ನಾಡಿನ ಉದ್ದಗಲಕ್ಕೂ ಸಂಚರಿಸಿ ವೀರಶೈವ ಮತವನ್ನು ಎಲ್ಲರಿಗೂ ಸಾರಿದರು. ಹನ್ನೆರಡು ವರ್ಷ ಉದ್ಯಾನವನದಲ್ಲಿ ತಪಸ್ಸುಗೈಯ್ದರು. ಹೀಗಾಗಿ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ಎಂದೇ ಪ್ರಸಿದ್ದಿ ಹೊಂದಿದರು. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಸಾವಿರಾರು ಅನುಯಾಯಿಗಳನ್ನು ಪಡೆದರು. ನವೀನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿ ಹರೀಶ್ ರಾಜ್ , ಹರ್ಷಲಾ ಹನಿ, ವಿನಯ್ ಗೌಡ, ವಲ್ಲಭ ಸೂರಿ, ನಯನಾ, ವಿಕ್ರಂ ಸೂರಿ, ಜ್ಯೋತಿ ರೈ ಮೊದಲಾದ ಕಲಾವಿದರುಗಳನ್ನು ಒಳಗೊಂಡಿದೆ.
