ETV Bharat / sitara

'ಸೌಂಡ್' ಮೂಲಕ ಮತ್ತೆ ಸದ್ದು ಮಾಡುತ್ತಿರುವ ಬಹುಮುಖ ಪ್ರತಿಭೆ ಯತಿರಾಜ್​​​

author img

By

Published : Jul 4, 2020, 5:02 PM IST

ಕೊರೊನಾ ಲಾಕ್​ಡೌನ್ ವೇಳೆ ಕಿರುಚಿತ್ರಗಳನ್ನು ಮಾಡಿದ್ದ ಯತಿರಾಜ್ ಇದೀಗ 'ಸೌಂಡ್' ಎಂಬ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರವನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ.

Yatiraj Sound short film
ಯತಿರಾಜ್​​​

ಬಹುಮುಖ ಪ್ರತಿಭೆ ಯತಿರಾಜ್ ಕಳೆದ 20 ವರ್ಷಗಳಿಂದ ಸಿನಿಮಾ, ಕಿರುತೆರೆ, ಬರವಣಿಗೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಇವರೊಬ್ಬ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಕೂಡಾ ಹೌದು.

  • " class="align-text-top noRightClick twitterSection" data="">

ಕೊರೊನಾಗೆ ಸಂಬಂಧಿಸಿದಂತೆ ಯತಿರಾಜ್​​​​​ ಮೂರು ಕಿರುಚಿತ್ರಗಳನ್ನು ಮಾಡಿದ್ದು ಇವು ಯೂಟ್ಯೂಬ್​​​ನಲ್ಲಿ ಲಭ್ಯವಿದೆ. ಇದೀಗ ಸಾಮಾಜಿಕ ಕಳಕಳಿಯುಳ್ಳ 'ಸೌಂಡ್' ಎಂಬ ಕಿರುಚಿತ್ರವನ್ನು ಅವರು ನಿರ್ಮಿಸಿದ್ದಾರೆ. ಈ ಕಿರುಚಿತ್ರ 4 ನಿಮಿಷ ಅವಧಿಯದ್ದಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಛಾಯಾಗ್ರಹಣ, ಸಂಕಲನ, ನಿರ್ಮಾಣ ಎಲ್ಲವನ್ನೂ ಯತಿರಾಜ್ ಅವರೇ ಮಾಡಿದ್ದಾರೆ. ಕಿರುಚಿತ್ರದ ಅವಧಿ 4 ನಿಮಿಷವಾದರೂ ಯತಿರಾಜ್ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿದ್ದಾರೆ.

ಅಣ್ಣನೊಬ್ಬ ತಂಗಿ ಹುಟ್ಟುಹಬ್ಬಕ್ಕೆ ಗಿಫ್ಡ್​​​​​​ ಕೊಡಿಸುವ ಸಲುವಾಗಿ ಬಟ್ಟೆ ಅಂಗಡಿಗೆ ಕರೆದೊಯ್ಯತ್ತಾನೆ. ಬಟ್ಟೆ ಅಂಗಡಿಯಲ್ಲಿ ಮ್ಯೂಸಿಕ್​ ಸೌಂಡ್​​​ ಕಡಿಮೆ ಮಾಡುವಂತೆ ಅಂಗಡಿವರ ಮೇಲೆ ರೇಗಾಡುತ್ತಾನೆ. ಆಗ ತಂಗಿ ಆತನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ನಿನಗೆ ಈ ಸೌಂಡ್​ ಕರ್ಕಶ ಎನಿಸುತ್ತದೆ. ಆದರೆ ನಿನ್ನ ಬೈಕ್​​ನಲ್ಲಿ ಸೈಲೆನ್ಸರ್​ ಬಹಳ ಸದ್ದು ಮಾಡುವುದು ನಿನಗೆ ಕರ್ಕಶ ಎನಿಸುವುದಿಲ್ಲವಾ ಎಂದು ಪ್ರಶ್ನಿಸುತ್ತಾಳೆ. ಆಗ ಒಂದು ಒಂದು ಫ್ಲಾಶ್​​​ಬ್ಯಾಕ್ ತೋರಿಸಲಾಗುತ್ತದೆ.

Yatiraj Sound short film
'ಸೌಂಡ್' ತಂಡ

ಕೊನೆಗೆ ಅಣ್ಣ ತನ್ನ ತಪ್ಪಿನ ಅರಿವಾಗಿ ತಂಗಿ ಬಳಿ ಕ್ಷಮೆ ಕೇಳುತ್ತಾನೆ. ಅಲ್ಲದೆ ಬೈಕ್​​ನ ಸೈಲೆನ್ಸರ್ ಬದಲಿಸಿಕೊಳ್ಳಲು ನಿರ್ಧರಿಸುತ್ತಾನೆ. ಕೊನೆಯಲ್ಲಿ ಯತಿರಾಜ್ ಬಂದು ತಮ್ಮ ನಿರೂಪಣೆ ಮೂಲಕ ಕಿರುಚಿತ್ರವನ್ನು ಮುಗಿಸುತ್ತಾರೆ. ಅಣ್ಣ ತಂಗಿ ಪಾತ್ರದಲ್ಲಿ ಚಂದು, ಭೂಮಿಕಾ ನಟಿಸಿದ್ದಾರೆ. ಇವರೊಂದಿಗೆ ವಿದ್ಯಾಶ್ರೀ, ಸುನಿಲ್, ಪೂರ್ಣಿಮಾ ತಾರಾಗಣದಲ್ಲಿದ್ದಾರೆ. ಹಿರಿಯ ಛಾಯಾಗ್ರಾಹಕ ಆರ್​​​. ಮನೋಹರ್ ಹಾಗೂ ಪತ್ರಕರ್ತ ಆರ್​. ಚಂದ್ರಶೇಖರ್ ಕೂಡಾ ಒಂದು ಶಾಟ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.