ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆಗಿದ್ದಾರೆ. ಸುಮಾರು 50 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಪ್ರಿಯಾಂಕಾ ಉತ್ತಮ ಪ್ರದರ್ಶನ ನೀಡಿದರು. ಆದರೂ, ಮನೆಯ ಸದಸ್ಯರ ಜೊತೆ ಅಷ್ಟಾಗಿ ಬೆರೆಯದ ಕಾರಣ ಎಲಿಮಿನೇಟ್ಗೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಶಮಂತ್ ಹಾಗೂ ದಿವ್ಯಾ ಸುರೇಶ್ ಜೊತೆ ಹೆಚ್ಚಾಗಿ ಸ್ನೇಹ ಮಾಡಿಕೊಂಡರು. ಆದರೂ, ಅವರ ಪ್ಲಾನ್ ವರ್ಕ್ ಔಟ್ ಆಗಲಿಲ್ಲ. ಟಾಸ್ಕ್ಗಳಲ್ಲಿ ಶ್ರಮ ಹಾಕಿದ್ರೂ ಯಾವುದೇ ಫಲ ನೀಡಲಿಲ್ಲ.ಅನಿರೀಕ್ಷಿತ ನಾಮಿನೇಷನ್ ಪ್ರಕ್ರಿಯೆಯಿಂದ ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಹಾಗೂ ಪ್ರಿಯಾಂಕಾ ಎಲಿಮಿನೇಷನ್ ಸುತ್ತಿನಲ್ಲಿದ್ದರು.
ಕಿರುತೆರೆಯಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ವೈಷ್ಣವಿ ಮೊದಲಿಗೆ ಸೇಫ್ ಆದರು. ಆನಂತರ ಪ್ರಶಾಂತ್ ಹಾಗೂ ಶುಭಾ ಪೂಂಜಾ ಮನೆಯಲ್ಲಿ ಉಳಿದುಕೊಂಡರು ಅಂತಿಮವಾಗಿ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆದರು.
ಸೆಕೆಂಡ್ ಇನಿಂಗ್ಸ್ ಆರಂಭಕ್ಕೂ ಮುನ್ನ ಪ್ರಿಯಾಂಕಾ ಹಾಗೂ ಚಕ್ರವರ್ತಿ ಒಂದಿಲ್ಲೊಂದು ವಿಷಯಗಳಿಗೆ ವಿವಾದದಲ್ಲಿ ತೊಡಗಿಕೊಂಡಿದ್ದರು. ಎಲಿಮಿನೇಟ್ ಆಗುವ ಕೆಲ ಗಂಟೆಗಳ ಮೊದಲು ಫೇಕ್ ಪ್ರಿಯಾಂಕಾ ಎಂದು ಚಕ್ರವರ್ತಿ ಸ್ಲೋಗನ್ ಬರೆದು ಪ್ರತಿಭಟಿಸಿದ್ದರು.
ಇದನ್ನೂ ಓದಿ: Bigg Boss Season 8: ಆಟ ಮರೆತ ಪ್ರಿಯಾಂಕಾ, ದಿವ್ಯಾ ಸುರೇಶ್ಗೆ ಏಟು!