ಈ ಭಾನುವಾರ ಸಾಧಕರ ಸೀಟ್ ಮೇಲೆ ಆಸೀನರಾಗಲಿರುವ ಸಾಧಕನ ಒಂದು ಚಿತ್ರ ರಿಲೀಸ್ ಮಾಡಿರುವ ವಾಹಿನಿ, ಅವರ ಮುಖ ಮುಸುಕು ಮಾಡಿದೆ. ಜತೆಗೆ ಈ ಭಾನುವಾರದ ಸಂಚಿಕೆಯಲ್ಲಿ ಬರಲಿರುವ ಸೆಲೆಬ್ರಿಟಿ ಯಾರು ಅಂತ ನೀವೇ ಗೆಸ್ ಮಾಡಿ ಎಂದು ನೋಡುಗರ ತಲೆಗೆ ಸ್ವಲ್ಪ ಕೆಲಸ ಕೊಟ್ಟಿದೆ.
ಸದ್ಯ ಝೀ ವಾಹಿನಿ ಬಿಡುಗಡೆ ಮಾಡಿರುವ ಮುಖ ಬ್ಲರ್ ಇರುವ ಸಾಧಕನ ಪೋಟೊ ನೋಡಿದ್ರೆ ಅದು ಖ್ಯಾತ ರಂಗಕರ್ಮಿ, ಚಲನಚಿತ್ರ ನಟ ವೈಜನಾಥ ಬಿರಾದಾರ್ ಎಂಬುದನ್ನು ಥಟ್ಟನೆ ಊಹಿಸಬಹುದು.
-
ಈ ಭಾನುವಾರದ ಸಂಚಿಕೆಯಲ್ಲಿ ಬರಲಿರುವ ಸೆಲೆಬ್ರಿಟಿ ಯಾರು ಅಂತ ಗೆಸ್ ಮಾಡೋಕೆ ಆಗುತ್ತಾ ನಿಮಗೆ? ನಿಮ್ಮ ಉತ್ತರವನ್ನು ಕೆಳಗೆ ಬರೆಯಿರಿ.
— ZEE5 Kannada (@ZEE5Kannada) June 20, 2019 " class="align-text-top noRightClick twitterSection" data="
ವೀಕ್ಷಿಸಿ ಇವರ ಸ್ಪೂರ್ತಿದಾಯಕ ಪಯಣವನ್ನು ವೀಕೆಂಡ್ ವಿಥ್ ರಮೇಶ್ ನಲ್ಲಿ ಈ ಭಾನುವಾರ #ZEE5 ನಲ್ಲಿ. ನೋಡ್ತಾ ಇರಿ!#WeekendwithRamesh4 #WWR4 #Guess pic.twitter.com/cDqcmnmA6Q
">ಈ ಭಾನುವಾರದ ಸಂಚಿಕೆಯಲ್ಲಿ ಬರಲಿರುವ ಸೆಲೆಬ್ರಿಟಿ ಯಾರು ಅಂತ ಗೆಸ್ ಮಾಡೋಕೆ ಆಗುತ್ತಾ ನಿಮಗೆ? ನಿಮ್ಮ ಉತ್ತರವನ್ನು ಕೆಳಗೆ ಬರೆಯಿರಿ.
— ZEE5 Kannada (@ZEE5Kannada) June 20, 2019
ವೀಕ್ಷಿಸಿ ಇವರ ಸ್ಪೂರ್ತಿದಾಯಕ ಪಯಣವನ್ನು ವೀಕೆಂಡ್ ವಿಥ್ ರಮೇಶ್ ನಲ್ಲಿ ಈ ಭಾನುವಾರ #ZEE5 ನಲ್ಲಿ. ನೋಡ್ತಾ ಇರಿ!#WeekendwithRamesh4 #WWR4 #Guess pic.twitter.com/cDqcmnmA6Qಈ ಭಾನುವಾರದ ಸಂಚಿಕೆಯಲ್ಲಿ ಬರಲಿರುವ ಸೆಲೆಬ್ರಿಟಿ ಯಾರು ಅಂತ ಗೆಸ್ ಮಾಡೋಕೆ ಆಗುತ್ತಾ ನಿಮಗೆ? ನಿಮ್ಮ ಉತ್ತರವನ್ನು ಕೆಳಗೆ ಬರೆಯಿರಿ.
— ZEE5 Kannada (@ZEE5Kannada) June 20, 2019
ವೀಕ್ಷಿಸಿ ಇವರ ಸ್ಪೂರ್ತಿದಾಯಕ ಪಯಣವನ್ನು ವೀಕೆಂಡ್ ವಿಥ್ ರಮೇಶ್ ನಲ್ಲಿ ಈ ಭಾನುವಾರ #ZEE5 ನಲ್ಲಿ. ನೋಡ್ತಾ ಇರಿ!#WeekendwithRamesh4 #WWR4 #Guess pic.twitter.com/cDqcmnmA6Q
ಹೈದರಾಬಾದ್ ಕರ್ನಾಟಕದ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಬಡಕುಟುಂಬದಲ್ಲಿ ಜನಿಸಿದ ವೈಜನಾಥ್ ಬಿರಾದಾರ್, ಕರ್ನಾಟಕದ ಎಲ್ಲರಿಗೂ ಗೊತ್ತು. ಹೆಚ್ಚಾಗಿ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಪ್ರತಿಭೆ 'ಓ ಮಲ್ಲಿಗೆ' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದರು.
ಚಿಕ್ಕಂದಿನಿಂದಲೇ ತಂದೆ ಕಳೆದುಕೊಂಡು, ಮೂರನೇ ತರಗತಿಗೆ ಶಿಕ್ಷಣ ನಿಲ್ಲಿಸಿದ ವೈಜನಾಥ ಸಂಸಾರ ನಿಭಾಯಿಸುವ ಜವಾಬ್ದಾರಿ ಹೊರುತ್ತಾರೆ. ಬಾಲ್ಯದಲ್ಲಿಯೇ ಕಲೆಯ ಆಸಕ್ತಿ ಬೆಳೆಸಿಕೊಂಡಿದ್ದ ಇವರು ನಾಟಕ ಕಂಪನಿಗಳನ್ನು ಸೇರಿಕೊಳ್ಳುತ್ತಾರೆ. ಅಲ್ಲಿಂದ ಬೆಂಗಳೂರಿಗೆ ಬಂದ ಅವರಲ್ಲಿ ಊಟಕ್ಕೂ ಹಣ ಇರುವುದಿಲ್ಲ. ಗಾಂಧಿನಗರದಲ್ಲಿ ಬೀದಿಗಳಲ್ಲಿ ಸುತ್ತಾಡುತ್ತಾರೆ. ಎರಡು-ಮೂರುದಿನದ ವರೆಗೆ ಬರೀ ನೀರು ಕುಡಿದು ಜೀವನ ಸಾಗಿಸುತ್ತಾರೆ. ಬಸ್ ಸ್ಟಾಪ್ಗಳಲ್ಲಿ ಮಲಗಿ ಜೀವನ ಸಾಗಿಸುತ್ತಾರೆ. ಕೊನೆಗೆ ಹೇಗೋ ಮಾಡಿ ಚಿತ್ರಗಳಲ್ಲಿ ನಟಿಸಲು ಅವಕಾಶ ಪಡೆಯುತ್ತಾರೆ. ಹೀಗೆ ಕಷ್ಟದಲ್ಲಿ ಜೀವನ ಸಾಗಿಸಿರುವ ವೈಜನಾಥ ಬಿರಾದಾರ್ ಇಂದು ಕನ್ನಡ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂತಹ ನಟನ ಜೀವನ ನಿಜಕ್ಕೂ ಇತರರಿಗೆ ಸ್ಫೂರ್ತಿದಾಯಕ.