ಅನಿರುಧ್ ಜತ್ಕರ್ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ ಇದೀಗ ಅಭಿಮಾನಿಗಳು ಅನಿರುಧ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶಗಳಿಗೆ ಅನಿರುಧ್ ರಿಪ್ಲೇ ಮಾಡುತ್ತಿಲ್ಲ ಎಂಬುದೇ ಅವರ ಬೇಸರಕ್ಕೆ ಕಾರಣ.
![Anirudh](https://etvbharatimages.akamaized.net/etvbharat/prod-images/kn-bng-06-anirudh-manavi-photo-ka10018_03062020151011_0306f_1591177211_454.jpg)
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಅನಿರುಧ್ ಅವರಿಗೆ ದಿನಕ್ಕೆ ಎಷ್ಟೋ ಮೆಸೇಜ್ಗಳು ಬರುತ್ತಿವೆ. ಆದರೆ ಶೂಟಿಂಗ್ ಬ್ಯುಸಿ, ವೈಯಕ್ತಿಕ ಕೆಲಸಗಳ ನಡುವೆ ಅಭಿಮಾನಿಗಳ ಸಂದೇಶಗಳಿಗೆ ಪ್ರತಿಕ್ರಿಯಿಸಲು ಅನಿರುಧ್ ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಈ ಕಾರಣಕ್ಕೆ ಅನಿರುಧ್ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಅನಿರುಧ್ ಧೀರ್ಘ ಪತ್ರ ಬರೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಅನಿರುಧ್ ಬರೆದಿರುವ ಪತ್ರದ ಸಾರಾಂಶ ಈ ರೀತಿ ಇದೆ.
- " class="align-text-top noRightClick twitterSection" data="">