ಕಲರ್ಸ್ ಕನ್ನಡ ವಾಹಿನಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನಟಿ ಹೆಸರು ಸಂಜನಾ ಬುರ್ಲಿ. ರಂಗಭೂಮಿ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಸಂಜನಾ ಬುರ್ಲಿ ಕಿರುತೆರೆ ಪಯಣಕ್ಕೆ ಮುನ್ನುಡಿ ಬರೆದದ್ದು 'ಪತ್ತೇದಾರಿ ಪ್ರತಿಭಾ' ಧಾರಾವಾಹಿ.
ನವೀನ್ ಕೃಷ್ಣ ನಿರ್ದೇಶನದ ಪತ್ತೆದಾರಿ ಪ್ರತಿಭಾ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಬಂದ ಉತ್ತರ ಕರ್ನಾಟಕದ ಚೆಲುವೆ ಸಂಜನಾಗೆ ರಂಗಭೂಮಿಯಲ್ಲಿ ನಟಿಸುತ್ತಿರುವಾಗಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಬೆಟ್ಟದಷ್ಟಿತ್ತು. ಅದೇ ಸಮಯದಲ್ಲಿ ಕಿರುತೆರೆ ಅವರನ್ನು ಕೈ ಬೀಸಿ ಕರೆಯಿತು. ಬಂದ ಅವಕಾಶವನ್ನು ಬಿಡದೆ ಕಿರುತೆರೆಯಲ್ಲಿ ನಟಿಸಲು ಆರಂಭಿಸಿದರು.
- " class="align-text-top noRightClick twitterSection" data="
">
'ಸ್ನೇಹರ್ಷಿ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಸಂಜನಾ, 'ವೀಕೆಂಡ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಟೆಕ್ಕಿಗಳ ಕುರಿತಾದ ಈ ಸಿನಿಮಾದಲ್ಲಿ ಅವರ ಜೀವನಶೈಲಿ, ಮೋಜು, ಮಸ್ತಿ, ವಿಕೇಂಡ್ಗಳಲ್ಲಿ ಏನು ಮಾಡುತ್ತಾರೆ ಹಾಗೂ ಇನ್ನಿತರ ವಿಚಾರಗಳನ್ನು ತೋರಿಸಲಾಗಿತ್ತು. ವಿಕೆಂಡ್ ಸಿನಿಮಾ ನಂತರ ಮತ್ತೊಮ್ಮೆ ಕಿರುತೆರೆಗೆ ಬಂದ ಸಂಜನಾ ಇದೀಗ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ಮಯೂರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.