ರೀಮಾ ಕಾಗ್ತಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಫಾಲನ್ ವೆಬ್ ಸರಣಿ ರಾಜಸ್ಥಾನದಲ್ಲಿ ಚಿತ್ರೀಕರಣವಾಗುತ್ತಿದೆ.
ಇನ್ನು ಈ ಸರಣಿಯಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿದ್ದು, ಪೊಲೀಸ್ ಧಿರಿಸಿನಲ್ಲಿ ಮಿಂಚಿದ್ದಾರೆ. ಈ ಸರಣಿಯು ಕ್ರೈಂ ಥ್ರಿಲ್ಲರ್ ಎಂದು ತಿಳಿದು ಬಂದಿದೆ.
ಅಮೆಜಾನ್ ಪ್ರೈಂನಲ್ಲಿ ಸರಣಿ ಫಾಲನ್ ಪ್ರಸಾರವಾಗಲಿದ್ದು, ಗುಲ್ಶನ್ ದೇವಯ್ಯ, ವಿಜಯ್ ವರ್ಮಾ ಮತ್ತು ಸೊಹುಮ್ ಷಾ ಅಭಿನಯಿಸಿದ್ದಾರೆ.