ETV Bharat / sitara

ಈ ವಾರ ದೊಡ್ಡಮನೆಯ ಕಿರಿಯ ಸ್ಪರ್ಧಿ ವಿಶ್ವನಾಥ್​ ಬಿಗ್​ಬಾಸ್​ ಜರ್ನಿ ಅಂತ್ಯ - Big boss kannada news

ಬಿಗ್​ಬಾಸ್​ ಸೀಸನ್​ 8 ರಲ್ಲಿ ಈ ವಾರ ಉತ್ತರ ಕರ್ನಾಟಕ ಭಾಗದ ಗಾನ ಪ್ರತಿಭೆ ವಿಶ್ವನಾಥ್​ ಎಲಿಮಿನೇಟ್​ ಆಗಿದ್ದಾರೆ. ಮನೆಯಿಂದ ಹೊರಹೋಗುವ ಮೊದಲು ತಾಯಿಗೆ ಬರೆದ ಹಾಡೊಂದನ್ನು ಅವರು ಹಾಡಿದರು.

Vishwanath elimination from  Big boss
ಈ ವಾರ ಕಿರಿಯ ಸ್ಪರ್ಧಿ ವಿಶ್ವನಾಥ್​ ಎಲಿಮಿನೇಟ್
author img

By

Published : Apr 19, 2021, 9:38 AM IST

ಬಿಗ್​ಬಾಸ್​ ಕನ್ನಡ ಸೀಸನ್​ 8 ರ ಏಳನೇ ವಾರ ಯುವ ಗಾಯಕ ವಿಶ್ವನಾಥ್​ ಎಲಿಮಿನೇಟ್​ ಆಗಿದ್ದಾರೆ. ದೊಡ್ಡಮನೆಯಲ್ಲಿ ಕ್ಯಾಪ್ಟನ್​ ಆಗಿದ್ದ ಒಂದು ವಾರ ಹೊರತುಪಡಿಸಿ, ಉಳಿದ ಎಲ್ಲಾ ವಾರದಲ್ಲೂ ವಿಶ್ವನಾಥ್​ ನಾಮಿನೇಟ್​ ಆಗಿದ್ದರು.

Big boss  kannada season eight
ರಘು, ನಿಧಿ, ದಿವ್ಯಾ ಸುರೇಶ್, ಪ್ರಶಾಂತ್, ವೈಷ್ಣವಿ ಗೌಡ, ಮಂಜು

ಈ ವಾರ ಶಮಂತ್​ ಮನೆಯಿಂದ ಹೊರಗೆ ಹೋಗಬಹುದು ಎಂದು ಬಹುತೇಕರು ಊಹಿಸಿದ್ದರು. ಪ್ರತಿ ವಾರವೂ ಕಡಿಮೆ ವೋಟ್ ಪಡೆದುಕೊಳ್ಳುತ್ತಿದ್ದ ಶಮಂತ್​​ ಕಳೆದ ವಾರ ಲಕ್​ ಎಂಬಂತೆ ಎಲಿಮಿನೇಷನ್​ನಿಂದ ಪಾರಾಗಿದ್ದರು. ಹಾಗಾಗಿ ಅವರು ಈ ವಾರ ಔಟ್​ ಆಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಅಂತಿಮವಾಗಿ ವಿಶ್ವನಾಥ್​ ಬಿಗ್​ ಬಾಸ್​ ಜರ್ನಿ ಅಂತ್ಯವಾಗಿದೆ.

Big boss  kannada season eight
ಬಿಗ್​ಬಾಸ್​ ಕನ್ನಡ ಸೀಸನ್​ 8 ರ ಸ್ಪರ್ಧಿಗಳು

ನಟ ಕಿಚ್ಚ ಸುದೀಪ್ ಅವರು ಇಲ್ಲದ ಈ ವಾರ ಬಿಗ್ ಬಾಸ್ ಸದಸ್ಯರಿಗೆ ಟಾಸ್ಕ್​ಗಳನ್ನು ನೀಡುತ್ತಾ ಒಬ್ಬೊಬ್ಬರನ್ನಾಗಿ ಸೇಫ್ ಮಾಡಿದರು. ಕೊನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಹಾಗೂ ವಿಶ್ವನಾಥ್ ಉಳಿದುಕೊಂಡರು. ಮನೆಯಿಂದ ಹೊರಹೋಗುವ ಸ್ಪರ್ಧಿಯ ವಿಟಿ ಟಿವಿ ಮೇಲೆ ಪ್ರಸಾರವಾಗಲಿದೆ ಎಂದು ಬಿಗ್​ಬಾಸ್​ ಹೇಳಿದರು. ನಂತರ ವಿಶ್ವನಾಥ್​ ಅವರ ಬಿಗ್ ಬಾಸ್ ಜರ್ನಿಯ ವಿಟಿ ಮನೆಯಲ್ಲಿನ ಟಿವಿಯ ಪರದೆ ಮೇಲೆ ಪ್ರಸಾರವಾಯಿತು.

Vishwanath elimination from  Big boss
ನಿಧಿ ಸುಬ್ಬಯ್ಯ

ಮನೆಯಿಂದ ಹೊರಹೋಗುವ ಮೊದಲು ತಾಯಿಗೆ ಬರೆದ ಹಾಡೊಂದನ್ನು ವಿಶ್ವನಾಥ್​ ಹಾಡಿದರು. ಬಿಗ್​ಬಾಸ್ ನೀಡಿದ​ ವಿಶೇಷ ಅಧಿಕಾರದಂತೆ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ನಟಿ ನಿಧಿ ಸುಬ್ಬಯ್ಯ ಅವರನ್ನು ಸೇವ್​ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.